February 23, 2026

Newsnap Kannada

The World at your finger tips!

ಸಿಎಂ ಕಾರ್ಯದರ್ಶಿ ವರ್ಗಾವಣೆ: ಪೊನ್ನುರಾಜ್ ಹೊಸ ಕಾರ್ಯದರ್ಶಿ

Spread the love

ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸಿಎಂ ಬೊಮ್ಮಾಯಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದಾರೆ.

ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಈ ಮೂಲಕ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಆರಂಭ ಮಾಡಿದ್ದಾರೆ.

ಕರ್ನಾಟಕ ಕೆಡರ್ 1997ನೇ ಬ್ಯಾಚ್ ನ ಐಎಎಸ್ ಅಧಿಕಾರಿ ಡಾ. ಸೆಲ್ವಕುಮಾರ್ ಅವರನ್ನು ಸಿಎಂ ಕಾರ್ಯದರ್ಶಿ ಹುದ್ದೆಯಿಂದ ವರ್ಗಾವಣೆ ಮಾಡಲಾಗಿದೆ.

ಸೆಲ್ವ ಕುಮಾರ್ ಅವರನ್ನು ಕೌಶಲ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ನೇಮಕ ಮಾಡಿ ಆದೇಶಿಸಿದ್ದಾರೆ.

ಐಎಎಸ್ ಅಧಿಕಾರಿ ಪೊನ್ನುರಾಜ್ ಅವರನ್ನು ಸಿಎಂ ಕಾರ್ಯದರ್ಶಿ ಯಾಗಿ ನೇಮಕ ಮಾಡಲಾಗಿದೆ. ಜೊತೆಗೆ ಕೆಪಿಸಿಎಲ್ ಎಂಡಿಯಾಗಿಯೂ ಹೆಚ್ಚುವರಿ ಹುದ್ದೆಯನ್ನು ನೀಡಲಾಗಿದೆ.

error: Content is protected !!