February 22, 2026

Newsnap Kannada

The World at your finger tips!

kodi swmy

ಸಂಕ್ರಾಂತಿ ಒಳಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಅವಘಡ : ಕೋಡಿಶ್ರೀಗಳು

Spread the love

ಸಂಕ್ರಾಂತಿ ಒಳಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಅವಘಡ ಜರುಗಲಿದೆ ಎಂದು ಅರಸೀಕೆರೆ ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಕೋಲಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶ್ರೀ ಗಳು, ಅಶುಭ ನುಡಿಗಳು ಈಗ ಬೇಡ. ಕೆರೆ ಕಟ್ಟೆಗಳು ತುಂಬಿ ಜಲಗಂಡಾಂತರ ಇನ್ನೂ ಇದೆ. ನೂತನ‌ ಮುಖ್ಯಮಂತ್ರಿ ಕುರಿತು ಏನನ್ನೂ ಈಗಲೇ ಹೇಳುವುದಿಲ್ಲ. ಕಾರ್ತಿಕ ಮಾಸ ಕಳೆದ ನಂತರ ಹೇಳುತ್ತೇನೆ ಎಂದು ಹೇಳಿದರು.

ಇದೇ ವೇಳೆ ಇತ್ತೀಚೆಗೆ ನಡೆದ ಘಟನೆಗಳ ಬಗ್ಗೆ ಮಾತನಾಡಿದ ಕೋಡಿಮಠದ ಶ್ರೀಗಳು, ನಾವು‌ ಯಡಿಯೂರಪ್ಪ ‌ಅವರನ್ನು ಉಳಿಸಿ ಅಂತ ಹೇಳಲಿಲ್ಲ. ಬದಲಾಗಿ ಸ್ವಾಮೀಜಿಗಳು ಬೀದಿಗೆ ಬಂದಾಗ, ಕೇಂದ್ರದ ನಾಯಕರು ಬಂದು ಗುರುಗಳಿಗೆ ಆಶ್ವಾಸನೆ ಕೊಡಬಹುದಿತ್ತು. ಆದರೆ ಮಠಾಧೀಶರಿಗೆ ಅಗೌರವ ತೋರಿದ್ದಾರೆ ಎಂದು ಹೇಳಿದರು.‌

error: Content is protected !!