February 25, 2026

Newsnap Kannada

The World at your finger tips!

sagarika

ಅಡಿಷನ್ ವೇಳೆ ನಗ್ನ ಫೋಟೊಗೆ ಬೇಡಿಕೆ ಇಟ್ಟಿದ್ದ ರಾಜ್ ಕುಂದ್ರಾ – ನಟಿ ಸಾಗರಿಕಾ

Spread the love

ತಮ್ಮ ಸಂಸ್ಥೆ ನಿರ್ಮಾಣದ ವೆಬ್ ಸೀರಿಸ್ ಒಂದರಲ್ಲಿ ನಟಿಸುವ ಅವಕಾಶ ನೀಡಲು ಹೇಳಿದ್ದ ರಾಜ್ ಕುಂದ್ರಾ ಅಡಿಷನ್ ವೇಳೆಯಲ್ಲಿ ನಗ್ನ ಫೋಟೋಗೆ ಫೋಸ್ ನೀಡುವಂತೆ ಮಾತುಕತೆ ವೇಳೆ ತಿಳಿಸಿದ್ದರು.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಮಾಡೆಲ್ , ನಟಿ
ಸಾಗರಿಕಾ ಶೋನಮ್ ಬಂಧಿತ ರಾಜ್ ಕುಂದ್ರಾ ಅವರ ಮತ್ತೊಂದು ಮುಖವನ್ನು ಎತ್ತಿ ತೋರಿಸಿದ್ದಾರೆ.

2020 ರ ಆಗಸ್ಟ್‌ ವೇಳೆಗೆ ಕುಂದ್ರಾ ಬಳಿ ಕೆಲಸ ಮಾಡುವ ಉಮೇಶ್ ಕಾಮತ್‌ ಫೋನ್ ಮಾಡಿ ರಾಜ್ ಕುಂದ್ರಾ ಅವರ ಈ ಆಫರ್ ಅನ್ನು ನೀಡಿದಾಗ , ನಾನು ನಿರಾಕರಿಸಿದೆ.

ಆಡಿಷನ್ ವೇಳೆಯಲ್ಲಿ ನನಗೆ ವಿಡಿಯೋ ಕಾಲ್ ಮಾಡುವಂತೆ ಹೇಳಲಾಗಿತ್ತು. ಆಗ ನಾನು ಕಾಲ್ ಮಾಡಿದೆ. ಅಲ್ಲಿ ಎಲ್ಲರೂ ಮುಖ ಮುಚ್ಚಿಕೊಂಡಿದ್ದರು. ಅದರಲ್ಲಿ ರಾಜ್ ಕುಂದ್ರಾ ಇದ್ದರು ಎಂದು ಕಾಣುತ್ತದೆ ಎಂದು ಸಾಗರಿಕಾ ಹೇಳಿದ್ದಾರೆ.

ಅಶ್ಲೀಲ ಸಿನಿಮಾ ನಿರ್ಮಾಣ ಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ, ಗೆಹನಾ ವಶಿಷ್ಟ, ಉಮೇಶ್ ಕಾಮತ್ ಅವರನ್ನು ಮುಂಬೈ ಪೋಲಿಸರು ಬಂಧಿಸಿದ್ದಾರೆ.

error: Content is protected !!