ಅಶ್ಲೀಲ ಸಿನಿಮಾ ನಿರ್ಮಾಣ ಆರೋಪ; ಶಿಲ್ಪಾಶೆಟ್ಟಿ ಪತಿ ರಾಜ್​​ಕುಂದ್ರಾ ಪೊಲೀಸ್ ವಶಕ್ಕೆ

Team Newsnap
1 Min Read

ಅಶ್ಲೀಲ ಸಿನಿಮಾಗಳನ್ನು ನಿರ್ಮಾಣ ಮಾಡಿ‌ ಪ್ರಚಾರ ಮಾಡುತ್ತಿದ್ದ ಆರೋಪದ ಮೇಲೆ ಬಂಧನಕ್ಜೆ ಒಳಗಾದವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯವರ ಪತಿ ರಾಜ್ ಕುಂದ್ರಾ ಅವರನ್ನು ಜುಲೈ 23 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ರಾಜ್ ಕುಂದ್ರಾ ಜೊತೆಗೆ ರನ್ ಥಾರ್ಪ್ ಎಂಬಾತನನ್ನೂ ಸಹ ಪ್ರಕರಣದಡಿ ಇಂದು ಬಂಧಿಸಲಾಗಿದೆ. ಆತನನ್ನೂ ಕೂಡ ಜುಲೈ 23 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ನಿನ್ನೆ ವಿಚಾರಣೆಗೆಂದು ತೆರಳಿದ್ದ ವೇಳೆ ರಾಜ್ ಕುಂದ್ರಾ ಅವರನ್ನು ಮುಂಬೈ ಕ್ರೈಂ ಬ್ರಾಂಚ್ ಬಂಧಿಸಿತ್ತು.

ಮುಂಬೈ ಪೊಲೀಸ್ ಕಮಿಷನರ್ ಮಾತನಾಡಿ, ರಾಜ್ ಕುಂದ್ರಾ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂಬುದಕ್ಕೆ ನಮ್ಮಲ್ಲಿ ಸೂಕ್ತ ಆಧಾರಗಳಿವೆ ಎಂದು ಹೇಳಿದ್ದಾರೆ.

Share This Article
Leave a comment