ಕೆ ಆರ್ ಎಸ್ ಅಣೆಕಟ್ಟೆಯ ಬಳಿ‌ ಗೋಡೆ ಕುಸಿತ : ಆತಂಕ ಸೃಷ್ಟಿಸುವ ದೃಶ್ಯಗಳು..!

Team Newsnap
2 Min Read

ಕೆ ಆರ್ ಎಸ್ ಡ್ಯಾಂ ಮೆಟ್ಟಿಲಿನ ಗೋಡೆಯಿಂದ 30ಕ್ಕೂ ಹೆಚ್ಚು ಕಲ್ಲು ಕುಸಿತ ಪ್ರಕರಣ ಭಾರಿ ಆತಂಕ ಸೃಷ್ಟಿಸಿದೆ.‌

krs anekattu 1 1

ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯದ ಭೀತಿ ಹೆಚ್ಚಿಸಿದ ಕಲ್ಲು ಕುಸಿತ..!
ಡ್ಯಾಂನಿಂದ ಬೃಂದಾವನ ಹಾಗೂ ಕಾವೇರಿ ಮಾತೆ ಪ್ರತಿಮೆಗೆ ಹೋಗಲು ನಿರ್ಮಿಸಿದ್ದ ಮೆಟ್ಟಿಲು +80 ಅಡಿ ಗೇಟುಗಳ ಬಳಿ ಇರುವ ಮೆಟ್ಟಿಲುಗಳು ಕುಸಿದು‌ ಹೋಗಿವೆ.‌

krs anekattu 2

ಡ್ಯಾಂ ಭದ್ರತೆ ದೃಷ್ಟಿಯಿಂದ ಹಲವು ವರ್ಷದ ಹಿಂದೆಯೇ ಮೆಟ್ಟಿಲ ಮೇಲೆ ಸಾರ್ವಜನಿಕರ ಸಂಚಾರ ನಿರ್ಬಂಧಿಸಲಾಗಿತ್ತು. ಡ್ಯಾಂ ಬಿರುಕು ವಿವಾದದ ಬೆನ್ನಲ್ಲೇ ಕಲ್ಲು ಕುಸಿತದಿಂದ ಆತಂಕ ಮನೆ ಮಾಡಿದೆ.

ಈ ಘಟನೆಯಿಂದಾಗಿ ಬೇಬಿ ಬೆಟ್ಟದ ಕಲ್ಲು ಗಣಿಗಾರಿಕೆಯಿಂದ ಡ್ಯಾಂಗೆ ಅಪಾಯದ ಭೀತಿ ಮತ್ತಷ್ಟು ಹೆಚ್ಚಳವಾಗುತ್ತಿದೆ ಎನ್ನುವ ಆರೋಪಗಳಿಗೆ ಸಾಕ್ಷಿ ಸಿಕ್ಕಂತಾಗಿದೆ.

srs anekattu 3

ಮಣ್ಣು, ಸುರ್ಕಿಯಿಂದ ನಿರ್ಮಾಣ ಮಾಡಿದ್ದ ಮೆಟ್ಟಿಲುಗಳು. ಸತತ ಮಳೆಯಿಂದಾಗಿ ಏಕಾಏಕಿ ಕುಸಿದಿರುವ ಕಲ್ಲುಗಳು.

ಅಧಿಕಾರಿಗಳ ಪರಿಶೀಲನೆ :

ಕಾವೇರಿ ನೀರಾವರಿ ನಿಯಮದ ಅಧೀಕ್ಷಕ ಎಂಜಿನಿಯರ್ ವಿಜಯ ಕುಮಾರ್ ನೇತೃತ್ವದಲ್ಲಿ ಪರಿಶೀಲನೆ ಮಾಡಿ ಆತಂಕ ಬೇಡ ಎಂದಿದೆ.‌

krs anekattu4

ಸತ್ಯ ಶೋಧನೆಗೆ ಮುಂದಾದ ಬಿಜೆಪಿ:

KRS ಬಿರುಕು ಹೇಳಿಕೆ ವಿವಾದ ಹಿನ್ನೆಲೆ ಬಿಜೆಪಿ ಸತ್ಯ ಶೋಧನೆಗೆ ಮುಂದಾಗಿದೆ.

ಡ್ಯಾಂ ಪರಿಶೀಲನೆಗೆ ಆಗಮಿಸಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ
ರವಿಕುಮಾರ್ ನೇತೃತ್ವದಲ್ಲಿ ಡ್ಯಾಂ ಪರಿಶೀಲನೆ ಮಾಡಿದೆ.‌

ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ,ಮಾಜಿ ಸಚಿವ ಎ.ಮಂಜು, ರಾಜ್ಯ ಕಾರ್ಯಕಾರಿಣಿ ಸದಸ್ಯ ಸಿದ್ದರಾಮಯ್ಯ ಒಳಗೊಂಡ ತಂಡದಿಂದ ಪರಿಶೀಲನೆಗೂ ಮುನ್ನ ರೈತಮೋರ್ಚಾ ಹಾಗೂ ಸ್ಥಳೀಯ ಕಾರ್ಯಕರ್ತರ ಜೊತೆ ಚರ್ಚೆ ಮಾಡಿದರು.‌

ಡ್ಯಾಂ ಸುರಕ್ಷತೆ ಕುರಿತು ಸ್ಥಳೀಯವಾಗಿ ಮಾಹಿತಿ ಪಡೆದ ಬಿಜೆಪಿ ತಂಡ ಬಳಿಕ ಡ್ಯಾಂ ವೀಕ್ಷಣೆ ನಡೆಸಿತು.‌

ಪ್ರತ್ಯೇಕ ತಂಡ ರಚನೆ – ಅಧ್ಯಯನದ ಬಳಿಕ ಸರ್ಕಾರಕ್ಕೆ ವರದಿ:

ಡ್ಯಾಂ ವೀಕ್ಷಣೆ ಬಳಿಕ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ,
KRS ಬಿರುಕು ಹಾಗೂ ಅಕ್ರಮ ಗಣಿ ವಿಚಾರ ಚರ್ಚೆ ಹೆಚ್ಚಾಗಿದೆ.
ವರಿಷ್ಠರ ಸಲಹೆಯಂತೆ ಇಂದು ಡ್ಯಾಂ ಪರಿಶೀಲನೆ. ಸತ್ಯಾಸತ್ಯತೆ ಅರಿಯಲು ಬಿಜೆಪಿ ತಂಡ ರಚನೆ. ಮುಂದಿನ ದಿನಗಳಲ್ಲಿ ಬಿಜೆಪಿಯ 2 ತಂಡ ರಚಿಸಿ ಪರಿಶೀಲನೆ ಮಾಡಲಿದ್ದೇವೆ ಎಂದರು.

Share This Article
Leave a comment