February 25, 2026

Newsnap Kannada

The World at your finger tips!

tagaru

ಬಕ್ರೀದ್ ಹಬ್ಬಕ್ಕೆ 1.25 ಲಕ್ಷ ರು ಕೊಟ್ಟು ಖರೀದಿಸಿದ ಎರಡು ಬಂಡೂರು ಟಗರು !

Spread the love

ಮಂಡ್ಯದ ಬಂಡೂರಿನ ಎರಡು ಟಗರುಗಳು 1.25 ಲಕ್ಷ ರುಗಳಿಗೆ ಮಾರಾಟವಾಗಿ ಸುದ್ದಿಯಾಗಿವೆ.

ತಲಾ 80 ಕೆಜಿ ತೂಕದ ಎರಡು ಬಂಡೂರು ತಳಿಯ ಟಗರುಗಳನ್ನು ಶಂಭು ಎನ್ನುವವರು ಒಂದು ವರ್ಷದಿಂದ ಸಾಕಿದ್ದರು.

ಇದೀಗ ಮಂಡ್ಯದ ಹಾಲಹಳ್ಳಿ ಬಡಾವಣೆಯ ಸಾಬೂದ್ದೀನ್ ಎಂಬುವವರು ಬಕ್ರೀದ್ ಹಬ್ಬಕ್ಕೆ 1ಲಕ್ಷದ 25 ಸಾವಿರ ರೂಪಾಯಿಯನ್ನು ನೀಡಿ ಖರೀದಿ ಮಾಡಿದ್ದಾರೆ.

ಒಂದು ವರ್ಷದಿಂದ ಮಂಡ್ಯದ ಸೂನಗಹಳ್ಳಿ ರೈತ ಶಂಭು ಈ ಟಗರುಗಳನ್ನು ಪ್ರೀತಿಯಿಂದ ಸಾಕಿದ್ದರು. ಶಂಭು ಅವರು ಟಗರುಗಳನ್ನು ಮಾರಾಟ ಮಾಡಿದ್ದಕ್ಕಾಗಿ ಸಾಬೂದ್ದೀನ್ ಅವರು ಕೇಕ್ ಕಟ್ ಮಾಡಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.

error: Content is protected !!