November 29, 2024

Newsnap Kannada

The World at your finger tips!

yedi

ಆಕ್ಸಿಜನ್​ ಘಟಕಗಳನ್ನು ಉದ್ಘಾಟಿಸಿದ ಯಡಿಯೂರಪ್ಪ: ಕೊರೊನಾ 3ನೇ ಅಲೆ ತಡೆಗೆ ಸಿದ್ಧತೆ

Spread the love

ಕ್ಯಾಪ್ ಜೆಮಿನಿ ಟೆಕ್ನಾಲಜಿ ಸರ್ವಿಸಸ್ ಇಂಡಿಯಾ ಲಿ., ವತಿಯಿಂದ ಸಿ.ಎಸ್.ಆರ್ ಯೋಜನೆಯಡಿ ವಿಕ್ಟೋರಿಯಾ ಹಾಗೂ ಚರಕ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗಿರುವ 400
ಎಲ್​.ಎಂ.ಪಿ.ಆಕ್ಸಿಜನ್​ ಘಟಕಗಳನ್ನು ಮುಖ್ಯಮಂತ್ರಿ ಬಿ. ಎಸ್ . ಯಡಿಯೂರಪ್ಪ ಸೋಮವಾರ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ 108 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಲಾಯಿತು.

ಈ ವೇಳೆ, ಅಲ್ಲಿ ಆರೋಗ್ಯ ಸಚಿವ, ಡಾ.ಕೆ.ಸುಧಾಕರ್​, ಕ್ಯಾಪ್ ಜೆಮಿನಿ ಸಂಸ್ಥೆಯ ಹಿರಿಯ ನಿರ್ದೇಶಕ ವಿಶ್ವನಾಥ್ ರಾಜೇಂದ್ರ ಹಾಗೂ ಮುರಳಿ ಶಂಕರನಾರಾಯಣನ್ ಮತ್ತಿತರರು ಈ ಉದ್ಘಾಟನೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!