ಕೆ ಆರ್ ಎಸ್ ಆಣೆಕಟ್ಟೆ – ಸುರಕ್ಷತೆಯ ಗೋಡೆ ಕುಸಿತ : ದುರಸ್ತಿ ಕಾರ್ಯ ಆರಂಭ – ಆತಂಕ

Team Newsnap
1 Min Read
heavy rain in Kodagu: Inflow to KRS begins ಕೊಡಗಿನಲ್ಲಿ ವರುಣನ ಅಬ್ಬರ : ಕೆಆರ್ ಎಸ್ ಗೆ ಒಳ ಹರಿವು ಆರಂಭ

ಈಗ ಕೆ ಆರ್ ಎಸ್‌‌ ಆಣೆಕಟ್ಟೆ ಸುರಕ್ಷತೆಯ ಬಗ್ಗೆ ಜನರಲ್ಲಿ ಆತಂಕ ಹಚ್ಚಾಗಿದೆ.‌

ಕೆಆರ್ ಎಸ್ ಆಣೆಕಟ್ಟೆ ನಿರ್ಮಾಣವಾಗಿ 90 ವರ್ಷಗಳ ಬಳಿಕ ಆಣೆಕಟ್ಟೆಯ ಬಳಿ ಕಲ್ಲುಗಳು ಕುಸಿತವಾಗಿದೆ. ನೀರಾವರಿ ಅಧಿಕಾರಿಗಳು ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.‌

ಬೃಂದಾವನ ಉದ್ಯಾನವನದಿಂದ ಕೆಆರ್ ಎಸ್ ಜಲಾಶಯದ ಮೇಲೆ ಹೋಗುವ ರಸ್ತೆಯಲ್ಲಿ ಕಲ್ಲು ಕುಸಿತವಾಗಿದೆ.‌ ಡ್ಯಾಂನ ಕಲ್ಲುಗಳು ಕುಸಿತವಾಗಿರುವ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಹೆಚ್ಚಾಗಿದೆ.

ಆಣೆಕಟ್ಟೆಯ ಸುರಕ್ಷತೆಗೆ ನಿರ್ಮಾಣ ಮಾಡಲಾಗಿದ್ದ ಕಲ್ಲುಗಳು ಕುಸಿದಿವೆ. ಆಣೆಕಟ್ಟು ನಿರ್ಮಾಣವಾದ 90 ವರ್ಷಗಳ ನಂತರ ಮೊದಲ ಬಾರಿಗೆ ಡ್ಯಾಂನ ಕಲ್ಲುಗಳು ಕುಸಿತವಾಗಿವೆ.‌ ನೀರಾವರಿ ನಿಗಮದ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.

ಕೆ ಆರ್ ಎಸ್‌ ಬಿರುಕು ಬಿಟ್ಟಿದೆ ಎಂದು ಹೇಳುತ್ತಿರುವ ಈ ಸಮಯದಲ್ಲಿಯೇ ಆಣೆಕಟ್ಟೆಯ ಕಲ್ಲು ಗೋಡೆ ಕುಸಿದಿರುವುದು ಕಾಕತಾಳೀಯ. ‌

Share This Article
Leave a comment