February 25, 2026

Newsnap Kannada

The World at your finger tips!

crime,murder,women

ಕೆ ಆರ್ ಪೇಟೆ – ಕಾರಿನಲ್ಲಿದ್ದ 7 ಲಕ್ಷ ರು‌. ಎಗರಿಸಿ ಪರಾರಿಯಾದ ದುಷ್ಕರ್ಮಿಗಳು

Spread the love

ಬ್ಯಾಂಕಿನಿಂದ 7 ಲಕ್ಷ ರು.‌ ಹಣ ಡ್ರಾ ಮಾಡಿ, ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಹಣವನ್ನು ಸಿನಿಮೀಯ ರೀತೀಯಲ್ಲಿ ಎಗರಿಸಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಕೆ ಆರ್ ಪೇಟೆ ಪಟ್ಟಣದಲ್ಲಿ ಗುರುವಾರ ಸಂಭವಿಸಿದೆ.

ಪಟ್ಟಣದ ನಿವಾಸಿ ಶಿಕ್ಷಕ ನಾಗರಾಜು ಹಣ ಕಳೆದುಕೊಂಡವರು.‌ ಪಟ್ಟಣದ ಕೆನರಾ ಬ್ಯಾಂಕ್ ನಿಂದ 7 ಲಕ್ಷ ಹಣ ಡ್ರಾ ಮಾಡಿಕೊಂಡು, ತಮ್ಮ ಕಾರ್ ನ ಒಳಭಾಗದಲ್ಲಿ‌ ಇಟ್ಟುಕೊಂಡು ಮನೆಯ ಬಳಿ ತೆರಳಿದ್ದಾರೆ‌.

ಮನೆಯ ಮುಂದೆ ಕಾರ್ ನಿಲ್ಲಿಸಿ ಮನೆಯ ಬಾಗಿಲು ತೆರೆದು ಬರುವಷ್ಟರಲ್ಲಿ ನಿಲ್ಲಿಸಿದ್ದ ಕಾರ್ ಡೋರ್ ನ ಗಾಜು ಒಡೆದು ಕಾರಿನಲ್ಲಿ ಹಣ ಎಗರಿಸಿದ್ದಾರೆ.

ಆಗ ಕಾರಿನ ಸೈರನ್ ಹೊಡೆದುಕೊಂಡ ಕೂಡಲೇ ಹಣದೊಂದಿಗೆ ದುಷ್ಕರ್ಮಿಗಳು ಪಲ್ಸರ್ ಬೈಕ್ ನಲ್ಲಿ ಪರಾರಿಯಾಗಿದ್ದಾರೆ. ಕಾರಿನಲ್ಲಿ ಬೆನ್ನಟ್ಟಿದರೂ‌ ಯಾವುದೇ ಪ್ರಯೋಜನವಾಗಿಲ್ಲ.
ಕೆ ಆರ್ ಪೇಟೆ ಪಟ್ಟಣ ಪೋಲಿಸರು ಫ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

error: Content is protected !!