February 25, 2026

Newsnap Kannada

The World at your finger tips!

dharshan1

ಏನಯ್ಯಾ ದರ್ಶನ್‍ಗೆ ತಲೆ ಇಲ್ವೇನಯ್ಯಾ, ಹೋಗಿ ಹೋಗಿ ನಾಯಿಗೆ ಕಚ್ಚಿದ್ದಾನೆ : ದರ್ಶನ್

Spread the love

ದಾರಿಯಲ್ಲಿ ಹೋಗುವ ನಾಯಿ ಬಂದು ನಂಗೆ ಕಚ್ಚಿದರೆ ಸ್ಕ್ರೋಲಿಂಗ್ ನ್ಯೂಸ್. ಅದೇ ದರ್ಶನ್, ನಾಯಿಗೆ ಕಚ್ಚಿದರೆ, ಏನಯ್ಯಾ ದರ್ಶನ್‍ಗೆ ತಲೆ ಇಲ್ವೆನಯ್ಯಾ. ಹೋಗಿ ಹೋಗಿ ನಾಯಿಗೆ ಕಚ್ಚಿದ್ದಾನೆ ಎನ್ನುತ್ತಾರೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿಕ್ರಿಯೆ ಇದು.

ಇಂದ್ರಜಿತ್ ಲಂಕೇಶ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ದರ್ಶನ್ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಹೋಟೆಲ್‍ನಲ್ಲಿ ಊಟ ಲೇಟಾಗಿ ಬಂದಾಗ ಕೇಳಿದ್ದೇವೆ. ಒಬ್ಬ ಹೋಟೆಲ್ ಕೆಲಸಗಾರನಿಗೆ ಬೈದರೆ ಹೋಟೆಲ್ ಮಾಲೀಕ ಕೇಳುತ್ತಾನೆ. ಆದರೆ ಹೊಡೆದಿರುವ ಆರೋಪ ಅವರು ಮಾಡಿದ್ದಾರೆ ಹೀಗಾಗಿ ಅವರನ್ನೇ ಕೇಳಿಕೊಳ್ಳಿ ಎಂದರು.

ದರ್ಶನ್ ಅವರ ಈ ಹೇಳಿಕೆಗೆ ಇಂದ್ರಜಿತ್ ಲಂಕೇಶ್ ಆಕ್ಷೇಪ ವ್ಯಕ್ತಪಡಿಸಿ, ದರ್ಶನ್ ಕೃಷಿ ಇಲಾಖೆಯ ರಾಯಭಾರಿಯಾಗಿದ್ದಾರೆ. ಕತ್ತರಿಸುತ್ತೇನೆ, ತುಂಡರಿಸುತ್ತೇನೆ ಎಂದು ಹೇಳುತ್ತಾರೆ. ನಟನಾಗಿ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದರು.

error: Content is protected !!