ಟೋಕಿಯೋ ಒಲಿಂಪಿಕ್ಸ್​​ಗೆ ಆಳ್ವಾಸ್ ಸಂಸ್ಥೆಯ ಇಬ್ಬರು ಮಾಜಿ ವಿದ್ಯಾರ್ಥಿನಿಯರು ಭಾಗಿ

Team Newsnap
0 Min Read

ಒಲಿಂಪಿಕ್ಸ್​ ಜುಲೈ 23 ರಿಂದ ಆಗಸ್ಟ್ 28 ವರೆಗೆ ಜಪಾನ್​​ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್​​ಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಆಳ್ವಾಸ್​​ ಪ್ರತಿಷ್ಠಾನದ ಇಬ್ಬರು ಮಾಜಿ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ.

ಇಬ್ಬರು ಮೂಲತಃ ತಮಿಳುನಾಡಿನ ತಿರುಚಿ ಮೂಲದರಾದ ಧನಲಕ್ಷ್ಮೀ ಹಾಗೂ ಶುಭಾ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.

ಭಾರತ ತಂಡದ 4×400 ಮೀಟರ್‌ ಮಿಕ್ಸೆಡ್ ರಿಲೇ ತಂಡವನ್ನು ಪ್ರತಿನಿಧಿಸಲಿದ್ದಾರೆ. 2016-17ನೇ ಶೈಕ್ಷಣಿಕ ವರ್ಷದಲ್ಲಿ ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಾಗಿದ್ದರು.‌

ಒಲಿಂಪಿಕ್ಸ್ ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಲಾ 1 ಲಕ್ಷ ರು. ಪ್ರೋತ್ಸಾಹ ಧನವನ್ನು ಆಳ್ವಾಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್​ ಆಳ್ವಾ ಪ್ರಕಟಿಸಿದ್ದಾರೆ.

Share This Article
Leave a comment