25 ಕೋಟಿ ಬ್ಯಾಂಕ್ ಸಾಲದ ಜಾಮೀನು ಪ್ರಕರಣ: ತಪ್ಪು ಯಾರೇ ಮಾಡಿದ್ದರೂ ಕಾನೂನು ಕ್ರಮ- ದರ್ಶನ್

Team Newsnap
2 Min Read

25 ಕೋಟಿ ರೂಪಾಯಿ ಬ್ಯಾಂಕ್ ಸಾಲದ ಜಾಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚಿಸಲು ಯತ್ನಿಸಿದ್ದಾರೆ ಎಂದು ನಟ ದರ್ಶನ್ ಹೇಳಿದ್ದಾರೆ.‌

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದರ್ಶನ್, ಜೂನ್ 16 ರಂದು ನನಗೆ ಈ ಸಂಬಂಧ ಮೊದಲ ಕರೆ ಬಂದಿತು. ನನ್ನ ತೋಟದ ಮನೆ ಸೇರಿದಂತೆ ಹಲವು ಆಸ್ತಿಗಳ ಕುರಿತು ಪರಿಶೀಲನೆ ನಡೆಸಬೇಕು ಎಂದು ಬ್ಯಾಂಕ್ ಅಧಿಕಾರಿ ಎಂದು ಹೇಳಿದ್ದ ವ್ಯಕ್ತಿಯೊಬ್ಬರು ತಿಳಿಸಿದರು ಎಂದು ದರ್ಶನ್ ಬಹಿರಂಗಪಡಿಸಿದರು.

ಅರುಣ್ ಕುಮಾರಿ ಎಂಬವರು ಈ ಸಂಬಂಧ ತಮ್ಮನ್ನು ನಂಬಿಸಲು ಪ್ರಯತ್ನಿಸಿದರು ಎಂದು ದರ್ಶನ್ ತಿಳಿಸಿದರು.

ಜೂನ್ ತಿಂಗಳಿನಲ್ಲಿ ಉಮಾಪತಿ ಯವರ ಕರೆ ಬಂದು ಅವರು ಶೂರಿಟಿ ಹಾಕಿದ್ದೀರ ಎಂದು ಕೇಳಿದರು. ಕಾನ್ಫರೆನ್ಸ್ ಕಾಲ್ ನಲ್ಲಿ ಅರುಣಾ ಕುಮಾರಿಯವರು ಇದ್ದರು. ಆಗ ಅವರು 25 ಕೋಟಿ ಸಾಲಕ್ಕೆ ತಾವು ಶೂರಿಟಿ ಹಾಕಿರುವುದಾಗಿ ಅರುಣಾ ಕುಮಾರಿಯವರು ತಮ್ಮ ನಿವಾಸದಲ್ಲಿ ತಿಳಿಸಿದ್ದಾರೆ. ತಮ್ಮ ಆಪ್ತರಾದ ಹರ್ಷರವರು ಹೀಗೆ ಮಾಡಿರುವುದಾಗಿ ಹೇಳಿದರು.

ನಂತರ ಹರ್ಷ ಹಾಗೂ ರಾಕಿಯವರ ಬಗ್ಗೆ ವಿಚಾರಿಸಿದ, ಅವರು ಯಾರು ಈ ಕೆಲಸ ಮಾಡಿಲ್ಲವೆಂದು ತಿಳಿಯಿತು. ಅರುಣಾ ಕುಮಾರಿಯವರು ತಮ್ಮ ತೋಟದ ಬಗ್ಗೆ ಮಾತಾಡಿ ಅಲ್ಲಿಗೆ ಒಮ್ಮೆ ಹೋಗಬೇಕೆಂದು ಹೇಳಿ ತೋಟಕ್ಕೆ ಭೇಟಿ ನೀಡಿದರು. ತೋಟದಲ್ಲಿ ಹರ್ಷ ಅವರನ್ನು ನೋಡಿ ಅರುಣಾ ಕುಮಾರಿಯವರು ಶಾಕ್ ಆದರು. ತೋಟದಿಂದ ಅರುಣಾ ಕುಮಾರಿಯವರು ಯಾರಿಗೋ ಕರೆ ಮಾಡಿದರು. ಅವರು ಗಾಬರಿಯಾಗಿಗಿದ್ದು ಕಂಡು ಬಂತು. ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಆ ಹೆಸರಿನವರು ತಮ್ಮ ಬ್ಯಾಂಕ್ ಉದ್ಯೋಗಿ ಅಲ್ಲ ಎಂಬುದು ತಿಳಿದು ಬಂತು.

ನಂತರ ಉಮಾಪತಿ ಯವರೊಂದಿಗೂ ಮತ್ತೆ ವಿಚಾರಿಸಿ ಅವರಿಗೂ ಒಂದು ದೂರು ನೀಡಲು ನಿರ್ಧರಿಸಿ, ಅರುಣಾ ಕುಮಾರಿ ಸತ್ಯ ಹೇಳಲು ತಮ್ಮ ನಿವಾಸಕ್ಕೆ ಬಂದು, ಇದೆಲ್ಲ ಮಾಡಿಸಿದ್ದು ಉಮಾಪತಿ ಎಂದು ಹೇಳಿದ್ದರು ಎಂದರು.
ಇದರಲ್ಲಿ ಯಾರ ಕೈವಾಡ ಇದೆ ಎಂಬುದು ತಿಳಿದಿಲ್ಲ.

ಅರುಣಾ ಕುಮಾರಿ, ಉಮಾಪತಿ, ಹರ್ಷ, ರಾಕಿ ಯಾರೆ ಆದರೂ ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಆದರೆ ಇದರಲ್ಲಿ ಅರುಣಾ ಕುಮಾರಿ ಜೊತೆ ಉಮಾಪತಿ ಕೈ ಜೋಡಿಸಿದ್ದಾರಾ ಎಂಬುದು ಬಗೆಹರಿಯ ಬೇಕಾಗಿರುವ ವಿಷಯ ಎಂದು ಹೇಳಿದರು.

Share This Article
Leave a comment