ಫೇಸ್‍ಬುಕ್‍ನಲ್ಲಿ ಪರಿಚಯವಾದ ವ್ಯಕ್ತಿಗೆ 2 ಲಕ್ಷ 50 ಸಾವಿರ ರು ಫೋನ್ ಪೇ ಮತ್ತು ಪೇಟಿಎಂ ಮೂಲಕ ಹಣ ಹಾಕಿ ಯುವಕನೋರ್ವ ಮೋಸ ಹೋಗಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿ ಜರುಗಿದೆ.
ಒಂದು ವರ್ಷದ ಹಿಂದೆ ಹಾನಗಲ್ ಯುವಕನೊಬ್ಬನಿಗೆ ಫೇಸ್‍ಬುಕ್‍ನಲ್ಲಿ ಪರಿಚಯವಾದ ಮಲ್ಲನಗೌಡ ಎಂಬ ವ್ಯಕ್ತಿ ದೂರವಾಣಿ ಮೂಲಕ ಸಂಪರ್ಕಕ್ಕೆ ಬಂದು, ತನ್ನ ಗೆಳತಿ ಪೂರ್ವಿ ಶೇಟ್ ಅವರ ತಾಯಿಗೆ ಬ್ರೇನ್ ಟ್ಯೂಮರ್ ಆಗಿದೆ. ಅವಳಿಗೆ ಆಸ್ಪತ್ರೆ ಖರ್ಚಿಗೆ ಹಣಬೇಕು. ಎರಡು ಲಕ್ಷದ ಐವತ್ತು ಸಾವಿರ ರೂ. ಹಣ ನೀಡಿದರೆ ಆಕೆ ಗುಣವಾದ ಬಳಿಕ ತಾಯಿ 5 ಲಕ್ಷ ಕೊಡುವುದಾಗಿ ನಂಬಿಸಿ, ಹಣ ಪಡೆದಿದ್ದಾನೆ.
ಒಂದು ವರ್ಷದಿಂದ ನಿರಂತರವಾಗಿ 2,50,000 ಸಾವಿರ ಹಣ ಹಾಕಿಸಿಕೊಂಡು ಈಗ ಹಣ ಕೊಡದೇ ನಾಪತ್ತೆಯಾಗಿದ್ದಾನೆ.
ಮೋಸ ಹೋದ ಯುವಕ, ಮಲ್ಲನಗೌಡ ಮತ್ತು ಆತನ ಗೆಳತಿ ಆತ್ಮ ಜೋಯ್ಸ್, ಪೂರ್ವಿ ಶೇಟ್ ಸೇರಿದಂತೆ ಮೂವರ ಮೇಲೆ ಹಾವೇರಿ ಸಿ.ಇ.ಎನ್.ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
- ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಹುಡುಕಾಟ ಸ್ಥಗಿತ
- ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
- ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
- ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 89 ಉದ್ಯೋಗಾವಕಾಶ
- ಕೆನರಾ ಬ್ಯಾಂಕ್ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
ತಿರುಪತಿ ತಿಮ್ಮಪ್ಪನ ಚಿನ್ನ ಕದಿಯಲು ಹೋಗಿ ಸಿಕ್ಕಿಬಿದ್ದ ಟಿಟಿಡಿ ನೌಕರ
ಆರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕೊಲೆ