ನಿಯಮ ಪಾಲಿಸಿ ಗಣಿಗಾರಿಕೆ – ನಮ್ಮನ್ನು ತ್ರಿಶಂಕು ಸ್ಥಿತಿಗೆ ತಳ್ಳಬೇಡಿ : ರವಿ ಬೋಜೇಗೌಡ

Team Newsnap
1 Min Read

ಪಾಂಡವಪುರದ ಬೇಬಿಬೆಟ್ಟ ವ್ಯಾಪ್ತಿಯಲ್ಲಿ ಗಣಿಗಾರಿಕೆ ಸಂಬಂಧ ಡ್ರೋನ್ ಸರ್ವೇ ಹಾಗೂ ಟ್ರಯಲ್ ಬ್ಲಾಸ್ಟಿಂಗ್‌ಗೆ ಹಲವು ಬಾರಿ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ನಾವು ರೈತರ ಮಕ್ಕಳು, ನಿಯಮಾವಳಿ ರೂಪಿಸಿ ಗಣಿಗಾರಿಕೆ ನಡೆಸುತ್ತಿದ್ದ ನಮ್ಮ ಉದ್ಯಮವನ್ನು ಸ್ಥಗಿತಗೊಳಿಸಲಾಗಿದೆ. ತ್ರಿಶಂಕು ಸ್ಥಿತಿಗೆ ನಮ್ಮನ್ನು ತಳ್ಳಬೇಡಿ ಎಂದು ಜಿಲ್ಲಾ ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷ ರವಿ ಭೋಜೇಗೌಡ ಹೇಳಿದರು. ‌

ಸುದ್ದಿಗಾರರೊಂದಿಗೆ ಮಾತನಾಡಿದ ರವಿ ಭೋಜೇಗೌಡರು, ಉದ್ಯಮಕ್ಕಾಗಿ ನಾವುಗಳು ಬ್ಯಾಂಕ್ ಸಾಲದ ಮೊತ್ತ, ಬಡ್ಡಿ, ವಿದ್ಯುತ್ ಶುಲ್ಕ ಹೆಚ್ಚಳವಾಗಿದೆ. ತ್ರಿಶಂಕು ಸ್ಥಿತಿಯಲ್ಲಿ ಜೀವನ ನಿರ್ವಹಣೆ ಮಾಡುವಂತಾಗಿದೆ. ಇದರಿಂದ ನಮ್ಮ ಮೇಲೆ ಅಪಪ್ರಚಾರ ನಡೆಸುವುದು ಸರಿಯಲ್ಲ ಎಂದರು.

ಯಾವುದೇ ವಾಹನಗಳಲ್ಲಿ ಖಚ್ಚಾ ವಸ್ತು ಸಾಗಾಣಿಕೆಗೆ ಪರವಾನಗಿ ಪಡೆಯಲಾಗಿರುತ್ತದೆ. ಕೆಲವು ರೈತರು ಪಟ್ಟಾ ಜಮೀನುಗಳ ಗಣಿಗಾರಿಕೆಗೆ ಮುಂದಾಗಿದ್ದಾರೆ. ೨೦೨೭ರವರೆಗೂ ಗಣಿಗಾರಿಕೆ ನಡೆಸಲು ಕೆಲವರಿಗೆ ಅವಕಾಶವಿದ್ದು, ಕೂಡಲೇ ತಜ್ಞರನ್ನು ಕರೆಸಿ ನ್ಯಜ್ಯತೆಯನ್ನು ಸಭೀತುಪಡಿಸಿ ಗಣಿಗಾರಿಕೆಗೆ ಅವಕಾಶ ನಿಡಬೇಕೆಂದು ಒತ್ತಾಯಿಸಿದರು.

ವಾರದ ಗಡುವು – ನೃಪತುಂಗ
ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ನೃಪತುಂಗ ಮಾತನಾಡಿ ಜಿಲ್ಲಾ ಗುತ್ತಿಗೆದಾರರ ಸಂಘ, ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮಂಡ್ಯ ಶಾಖೆ, ಕ್ರಷರ್ ಮಾಲೀಕರ ಸಂಘ, ಜಲ್ಲಿ ಕ್ವಾರೆ ಮಾಲೀಕರ ಸಂಘ, ಮಂಡ್ಯ ಜಿಲ್ಲಾ ಲಾರಿ ಮಾಲೀಕರ ಸಂಘ ಹಾಗೂ ಸರ್ಕಾರಿ ನೊಂದಾಯಿತ ಗುತ್ತಿಗೆದಾರರ ಸಹಭಾಗಿತ್ವದಲ್ಲಿ ನಾವು ಸಭೆ ನಡೆಸಿ ಕೈಗೊಂಡಿರುವ ತೀರ್ಮಾನದಂತೆ ಎಂ.ಎಸ್.ಐ.ಎಲ್. ಮಾದರಿಯಲ್ಲಿ ನಿರ್ಮಾಣ ಸಾಮಗ್ರಿಗಳನ್ನು ಸರ್ಕಾರವೇ ನಿಡಬೇಕು ಅಥವಾ ಉದ್ಯಮಕ್ಕೆ ಎದುರಾಗಿರುವ ಅಪಪ್ರಚಾರಕ್ಕೆ ಅಸ್ಪದವಿಲ್ಲದಂತೆ ನಿಗದಿತ ಗಣಿಗಾರಿಕೆಗೆ ಅವಕಾಶ ನೀಡಬೇಕು ಇಲ್ಲದಿದ್ದರೆ, ಜು.೧೨ ರಂದು ಜಿಲ್ಲಾಧಿಕಾರಿಗಳನ್ನು ಭೇಟಿ ನೀಡಿ ವಾರದ ಗಡುವು ನೀಡಿ ಕಾಮಗಾರಿ ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

Share This Article
Leave a comment