January 16, 2025

Newsnap Kannada

The World at your finger tips!

ravindra11

ನಟ ಗಣೇಶ್​ ಥರ ಇದ್ರಿ : ಈಗ ವಜ್ರಮುನಿ ಥರಾ ಆಡ್ತಿರಾ- ರವೀಂದ್ರನಿಗೆ ರಾಕ್​ಲೈನ್​ ಟಾಂಗ್

Spread the love

ಮಂಗಾರು ಮಳೆ ಗಣೇಶ್​ ಥರ ಇದ್ದವರು ಈಗ ವಜ್ರಮುನಿ ಥರಾ ಆಡ್ತಿರಾ ಎಂದು ಶಾಸಕ
ರವೀಂದ್ರ ಶ್ರೀಕಂಠಯ್ಯ ಅವರಿಗೆ ನಿರ್ಮಾಪಕ ರಾಕ್​ಲೈನ್​ ಟಾಂಗ್ ನೀಡಿದರು.

ಅಕ್ರಮ ಕಲ್ಲು ಗಣಿಗಾರಿಕೆ ಆರಂಭಿಸಿದ್ದೇ ರೆಬಲ್ ಸ್ಟಾರ್ ಅಂಬರೀಶ್’ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆಗೆ ರಾಕ್​​ಲೈನ್​​ ವೆಂಕಟೇಶ್ ಕಿಡಿಕಾರಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ರಾಕ್​ಲೈನ್​, ರವೀಂದ್ರ ಶ್ರೀಕಂಠಯ್ಯನವರೇ ನಾನು ನಿಮಗೆ ಒಂದು ಮಾತನ್ನ ಹೇಳಲು ಇಷ್ಟಪಡುತ್ತೇನೆ. ನಾನು ನಿಮ್ಮನ್ನು ತುಂಬಾ ವರ್ಷಗಳಿಂದ ನೋಡಿಕೊಂಡು ಬಂದಿದ್ದೇನೆ. ಆವಾಗ ನಾನು ನಿಮ್ಮನ್ನ ಒಬ್ಬ ಫಿಲಂ ಆ್ಯಕ್ಟರ್​ ಥರಾ ನೋಡಿಕೊಂಡು ಬಂದೆ. ಅಲ್ಲದೇ ಒಂದು ಸಿನಿಮಾಗೆ ಬನ್ನಿ ಎಂದು ಕೂಡ ಹೇಳಿದ್ದೆ. ಆವಾಗ ನೀವು ಮುಂಗಾರು ಮಳೆ ಗಣೇಶ್​ ಥರಾ ಇದ್ದೀರಿ. ನೀವು ಬೆಳೀತಾ ಬೆಳೀತಾ, ಅದ್ಯಾರ್​ ಮಾತುಗಳನ್ನು ಕೇಳಿಕೊಂಡು, ವಜ್ರಮುನಿ ತಮ್ಮ ಪಾತ್ರದಲ್ಲಿ ಯಾವ ರೀತಿ ಮಾಡ್ತಿದ್ದರೋ ಹಾಗೇ ಮಾಡಲು ಶುರುಮಾಡಿದ್ದೀರ.. ವಜ್ರಮುನಿಯ ಹಾಗೆ ಖಳನಾಯಕನ ಥರಾ ಕೂಗಾಡಿಕೊಂಡು, ಹಾರಾಡಿಕೊಂಡು, ಚೀರಾಡಿಕೊಂಡು ಮಾಡುತ್ತಿದ್ದೀರಾ. ಇದು ಒಳ್ಳೆಯದಲ್ಲ.. ಎಂದು ಕಿವಿ ಮಾತು ಹೇಳಿದರು.

Copyright © All rights reserved Newsnap | Newsever by AF themes.
error: Content is protected !!