February 25, 2026

Newsnap Kannada

The World at your finger tips!

dilip kumar

ಬಾಲಿವುಡ್​ ನಟ ದಿಲೀಪ್ ಕುಮಾರ್ ನಿಧನ

Spread the love

ಬಾಲಿವುಡ್​ನ ಲೆಜೆಂಡರಿ ನಟ ದಿಲೀಪ್ ಕುಮಾರ್(98)​ ವಿಧಿವಶರಾಗಿದ್ದಾರೆ.

ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ನಿನ್ನೆ ಅವರನ್ನು ಮುಂಬೈನ ಹಿಂದುಜಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದರು.

ತಮ್ಮ 94ನೇ ಹುಟ್ಟುಹಬ್ಬದಂದು ದಿಲೀಪ್ ಆಸ್ಪತ್ರೆಯಲ್ಲೇ ಕಳೆದಿದ್ದರು. ಇದೇ ಡಿಸೆಂಬರ್‌ನಲ್ಲಿ ಅವರು 99ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳಬೇಕಿತ್ತು.
ಪತ್ನಿ ಸೈರಾ ಬಾನು ಅವರನ್ನು ಅಗಲಿದ್ದಾರೆ.

ಒಂದೇ ತಿಂಗಲ್ಲಿ ಎರಡನೇ ಬಾರಿಗೆ ದಿಲೀಪ್​ ಕುಮಾರ್​ರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.

ಮೊದಲ ಬಾರಿಗೆ ಜೂನ್ 6 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಿ, ಆಕ್ಸಿಜನ್ ಸಪೋರ್ಟ್​ನಲ್ಲಿ ಇರಿಸಲಾಗಿತ್ತು.

ಕಳೆದ ಕೆಲವು ವರ್ಷಗಳಿಂದೀಚೆಗೆ ದಿಲೀಪ್ ಅವರಿಗೆ ಅರೋಗ್ಯ ಸಮಸ್ಯೆ ಹೆಚ್ಚಾಗಿತ್ತು. ಮೂತ್ರಪಿಂಡದ ಸಮಸ್ಯೆ ಹಾಗೂ ನ್ಯುಮೋನಿಯಾದಿಂದ ಬಳಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದರು.

error: Content is protected !!