January 12, 2025

Newsnap Kannada

The World at your finger tips!

iaf jammu

ಐಎಎಫ್ ವಾಯುನೆಲೆ ಸ್ಫೋಟಕ್ಕೆ 2 ಪ್ರತ್ಯೇಕ ಡ್ರೋಣ್ : ಇಬ್ಬರು ಶಂಕಿತರು ವಶಕ್ಕೆ

Spread the love

ದೇಶದ ಐಎಎಫ್ ವಾಯುನೆಲೆ ಸ್ಫೋಟಕ್ಕೆ 2 ಪ್ರತ್ಯೇಕ ಡ್ರೋಣ್ ಬಳಕೆ ಮಾಡಿದ್ದಾರೆ. ಈ ಸಂಬಂಧ ಇಬ್ಬರು ಶಂಕಿತರನ್ನು ವಶಕ್ಕೆ ಪಡೆಲಾಗಿದೆ.

ದೇಶದಲ್ಲಿ ಇದೇ ಮೊದಲ ಬಾರಿಗೆ ಉಗ್ರರು ಸ್ಫೋಟ ನಡೆಸಲು ಡ್ರೋಣ್ ಬಳಸಿದ್ದಾರೆ, ಅದರಲ್ಲೂ ಪಾಕ್ ಮೂಲದ ಡ್ರೋಣ್ ಬಳಕೆಯಾಗಿದೆ ಎನ್ನಲಾಗುತ್ತಿದೆ.

ಎರಡು ಕಡೆ ಕೃತ್ಯ ನಡೆಸಿರುವ ಉಗ್ರರು, ಪ್ರತ್ಯೇಕ ಎರಡು ಡ್ರೋಣ್​​ಗಳನ್ನ ಬಳಸಿದ್ದಾರೆ ಅನ್ನೋದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

drone iaf

ಘಟನಾ ಸ್ಥಳಕ್ಕೆ ಎನ್​ಐಎ ಅಧಿಕಾರಿಗಳ ತಂಡ ಭೇಟಿ ನೀಡಿ ಕೃತ್ಯದ ಬಗ್ಗೆ ಮಾಹಿತಿ ಕಲೆ ಹಾಕಿದೆ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಲೋ-ಇಂಟೆನ್ಸಿಟಿ ಸ್ಫೋಟ ನಡೆದಿದೆ. ಸ್ಫೋಟದ ಸದ್ದು ಸುಮಾರು 2 ಕಿಲೋ ಮೀಟರ್ವರೆಗೆ ಕೇಳಿಸಿದೆ. ಅಲ್ಲದೇ ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ಈ ಮಧ್ಯೆ ಐಎಎಫ್​ ಉನ್ನತ ಅಧಿಕಾರಿಗಳ ಸಭೆ ನಡೆಸಲಿದೆ. ಪಾರ್ಕ್​​ ಮಾಡಿದ್ದ ವಿಮಾನಗಳನ್ನು ಡ್ರೋಣ್ ಮೂಲಕ ಟಾರ್ಗೆಟ್ ಮಾಡಲಾಗಿತ್ತಾ? ಇನ್ಮುಂದೆ ಡ್ರೋಣ್ ಮೂಲಕ ಯುದ್ಧ ವಿಮಾನಗಳನ್ನು ಟಾರ್ಗೆಟ್​ ಮಾಡಿದರೆ ಹೇಗೆ ಕ್ರಮಕೈಗೊಳ್ಳಬಹುದು ಅನ್ನು ಸಂಬಂಧ ಚರ್ಚೆ ನಡೆಯಲಿದೆ.

Copyright © All rights reserved Newsnap | Newsever by AF themes.
error: Content is protected !!