January 11, 2025

Newsnap Kannada

The World at your finger tips!

election , JDS , Politics

Political retirement if HDK does not become CM - CM Ibrahim ಹೆಚ್​.ಡಿ.ಕೆ ಸಿಎಂ ಆಗದಿದ್ದರೆ ರಾಜಕೀಯ ನಿವೃತ್ತಿ - ಸಿ.ಎಂ.ಇಬ್ರಾಹಿಂ

ಸೊಸೆ ವಲಸೆ ಬಂದವಳು ಎಂದರೆ ಆಕೆಗೆ ಏಕೆ ತಾಳಿ ಕಟ್ಟಿದಿರಿ? ಇಬ್ರಾಹಿಂ ಪ್ರಶ್ನೆ

Spread the love

ಮದುವೆಯಾಗಿ ಮನೆಗೆ ಬರುವ ಸೊಸೆ ಹೊಸದಾಗಿಯೇ ಬರೋದು, ಸೊಸೆಗೆ ನೀನು ವಲಸೆ ಬಂದವಳು ಅಂತ ಹೇಳೋಕಾಗುತ್ತಾ? ಎಂದು ಮಾರ್ಮಿಕವಾಗಿ ಕಾಂಗ್ರೆಸ್​ನ ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಪ್ರಶ್ನೆ ಮಾಡಿದರು.‌

ಸುದ್ದಿಗಾರರ ಜೊತೆ ಮಾತನಾಡಿದ ಇಬ್ರಾಹಿಂ, ಕಾಂಗ್ರೆಸ್​ನಲ್ಲಿ ನಡೆಯುತ್ತಿರುವ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಪೈಪೋಟಿಯ ಬಗ್ಗೆ ಪ್ರತಿಕ್ರಿಯೆ ನೀಡಿ, ಸೊಸೆ ಬಂದು ಕೆಲವು ದಿನಕ್ಕೆ ಕೀಲಿಕೈ ಅವಳ ಕೈಗೆ ಸೇರುತ್ತದೆ. ಈಗ ಸಿದ್ದರಾಮಯ್ಯ ಕೈಗೆ ಕೀಲಿಕೈ ಸಿಕ್ಕಿದೆ. ವಲಸಿಗ ಹೊಸಬ ಎಂಬ ಜಟಾಪಟಿ ಮುಂದೆ ನಡೆಯಲ್ಲ.ಎಂದರು.

ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡಿದ್ದು ಯಾರು? ಬಳ್ಳಾರಿ ಪಾದಯಾತ್ರೆಯಲ್ಲಿ ಅವರನ್ನು ಮುಂದೆ ತಂದಿದ್ಯಾರು?. ಇಂಥವನೊಬ್ಬ ಇದ್ದಾನೆ ಎಂದು ಹೇಳಿದ್ದೇ ನಾವು’ ಎಂದು ಸಿ.ಎಂ.ಇಬ್ರಾಹಿಂ ಹೇಳಿದರು.

ಹೀರೋ ಇದ್ದರೂ ಹಿನ್ನೆಲೆ ಗಾಯಕರು ಯಾರು? ಸ್ವಲ್ಪ ಕ್ಯಾಸೆಟ್ ತೆಗೆದು ನೋಡಿ, ಹಿನ್ನೆಲೆ ಗಾಯಕ ಕಾಣಿಸಲ್ಲ. 1ರೂ.ಗೆ ಅಕ್ಕಿ, ಮಧ್ಯಾಹ್ನದ ಊಟ ತಂದವರು ಯಾರು? ಆ ಯೋಜನೆಯನ್ನು ತಮಿಳುನಾಡಿನಲ್ಲಿ ಕುಳಿತು ಅಧ್ಯಯನ ಮಾಡಿ ನಾನು ಪರಿಚಯಿಸಿದ್ದೆ. ಯೋಜನಾ ಆಯೋಗದ ಉಪಾಧ್ಯಕ್ಷನಾಗಿ ಯೋಜನೆ ಕೊಟ್ಟಿದ್ದೆ. ಆ ಯೋಜನೆ ಸಕ್ಸಸ್ ಆಯಿತು ಎಂದರು.

ಸಿದ್ದರಾಮಯ್ಯ ಸಿಎಂ ಆದಾಗ ಒಳ್ಳೆಯ ಟೀಂ ಸಿಕ್ಕಿತ್ತು, ಆದರೆ ಬಿಎಸ್‌ವೈಗೆ ಸಿಗಲಿಲ್ಲ. ಸಿಎಂ ಯಡಿಯೂರಪ್ಪ, ಪುತ್ರ ವಿಜಯೇಂದ್ರ ಇಬ್ಬರೇ ಟೀಂ ಆಗಿದ್ದಾರೆ. ಸಿಎಂ ಯಡಿಯೂರಪ್ಪಗೆ ಜಾತಿ ಬೆಂಬಲ ಇದೆ. ಬಿಎಸ್‌ವೈ ಬಿಜೆಪಿ ಬಿಟ್ಟರೆ ಬಿಜೆಪಿಗೆ ಬರೋದು 40 ಸೀಟು ಎಂದು ಅವರು ವ್ಯಾಖ್ಯಾನಿಸಿದರು.

Copyright © All rights reserved Newsnap | Newsever by AF themes.
error: Content is protected !!