February 23, 2026

Newsnap Kannada

The World at your finger tips!

dalith

ಪಂಚಾಯ್ತಿ ಎದುರೇ ಶವ ದಹನಕ್ಕೆ ಸಿದ್ದತೆ ಮಾಡಿದ ದಲಿತ ಕುಟುಂಬ

Spread the love

ಸ್ಮಶಾನದಲ್ಲಿ ದಲಿತ ಮಹಿಳೆಯೊಬ್ಬಳ ಅಂತ್ಯಸಂಸ್ಕಾರಕ್ಕೆ ಮೇಲ್ವರ್ಗದ ವ್ಯಕ್ತಿಯೋರ್ವ ಅಡ್ಡಿ‌ಪಡಿಸಿದ ಪ್ರಸಂಗ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹರನಗಿರಿ ಗ್ರಾಮದಲ್ಲಿ ಜರುಗಿದೆ.

ಈ ಘಟನೆಯಿಂದ ನೊಂದ ದಲಿತ ಕುಟುಂಬ ಗ್ರಾಮ‌ಪಂಚಾಯತಿ ಎದುರು‌ ಅಂತ್ಯ ಸಂಸ್ಕಾರ ಮಾಡಲು ‌ಮುಂದಾಗಿದ್ದಾರೆ.

ಗ್ರಾಮದ ದಲಿತ ಕುಟುಂಬದ ಹನುಮವ್ವ ಅಣ್ಣಿಗೇರಿ ಎಂಬ ಹಿರಿಯ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.

ಅಂತ್ಯಸಂಸ್ಕಾರ‌ ಮಾಡಲು ಕುಟುಂಬದ ಸದಸ್ಯರು ಸ್ಮಶಾನಕ್ಕೆ ಕಟ್ಟಿಗೆ ತೆಗೆದುಕೊಂಡು ಹೋಗುವ ಸಮಯದಲ್ಲಿ ಮೇಲ್ವರ್ಗದ ವ್ಯಕ್ತಿಯೋರ್ವ ಅಡ್ಡಿಪಡಿಸಿದ್ದಾನೆ ಎನ್ನಲಾಗಿದೆ.

ಸ್ಮಶಾನ ನಮ್ಮ ಹೆಸರಿನಲ್ಲಿದೆ ನೀವು ಇಲ್ಲಿ ಅಂತ್ಯಸಂಸ್ಕಾರ ಮಾಡ ಬಾರದು ಎಂದು ತಾಕೀತು ಮಾಡಿದ್ದಾನೆ.

ಈ ಘಟನೆಯಿಂದ ‌ಕಂಗಾಲಾದ ಕುಟುಂಬಸ್ಥರು ಗ್ರಾಮ ಪಂಚಾಯತಿ ಮುಂದೆ ಅಂತ್ಯಸಂಸ್ಕಾರ ಮಾಡಲು‌ ಮುಂದಾಗಿದ್ದಾರೆ.

ನಂತರ ಸ್ಥಳಕ್ಕೆ ಆಗಮಿಸಿದ ಕಂದಾಯ ಅಧಿಕಾರಿಗಳು ಹಾಗೂ‌ ಪೊಲೀಸರು ಗ್ರಾಮದ ಜನರನ್ನು ಮನವೊಲಿಸುವ ಮೂಲಕ ಮತ್ತೆ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲು ಅನುವು‌ ಮಾಡಿಕೊಟ್ಟಿದ್ದಾರೆ.

error: Content is protected !!