ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಡ್ಯ ತಾಲೂಕಿನ ಸ್ವ-ಸಹಾಯ ಸಂಘಗಳಿಗೆ 2 ಕೋಟಿ ಲಾಭಾಂಶ ವಿತರಣಾ ಕಾರ್ಯಕ್ರಮಕ್ಕೆ ಜಿಲ್ಲಾ ನಿರ್ದೇಶಕ ವಿನಯ್ ಕುಮಾರ್ ಸುವರ್ಣ ಚಾಲನೆ ನೀಡಿದರು
ಈ ವೇಳೆ ಮಾತನಾಡಿದ ವಿನಯಕುಮಾರ್ ಸುವರ್ಣರವರು ಸಂಸ್ಥೆಯು 8 ವರ್ಷಗಳಿಂದ ತಾಲೂಕಿನಲ್ಲಿ ಜನರ ಸಂಘಟನೆ ಮಾಡುವ ಮೂಲಕ ಸ್ವ -ಸಹಾಯ ಸಂಘಗಳ ರಚನೆ ಮಾಡಿಕೊಂಡು ಉಳಿತಾಯವನ್ನು ಮಾಡಿಸಿ ನಂತರ ಕೃಷಿ ಹೈನುಗಾರಿಕೆ ಸ್ವ-ಉದ್ಯೋಗ ಶಿಕ್ಷಣ ಮೂಲಭೂತ ಸೌಕರ್ಯ ಹೀಗೆ ಹಲವಾರು ಉದ್ದೇಶಗಳಿಗೆ ಪ್ರಗತಿನಿಧಿ ಸಾಲವನ್ನು ನೀಡಲಾಗುತ್ತಿದೆ ಎಂದರು.
ಸಂಘ ನಿರ್ವಹಣೆಯಾದ ಆಧಾರದ ಮೇಲೆ ಸಂಘಗಳಿಗೆ ಲಾಭಾಂಶ ಬಂದಿರುತ್ತದೆ. ಮಂಡ್ಯ ತಾಲೂಕಿನ ಸ್ವ -ಸಹಾಯ ಸಂಘದ ಸದಸ್ಯರಿಗೆ ಲಾಭಾಂಶವನ್ನು ನೀಡಲಾಗುತ್ತಿದೆ ಈ ಕೊರೋನ ಸಂದರ್ಭದಲ್ಲಿ ಸದಸ್ಯರಿಗೆ ಲಾಭಾಂಶವು ವರದಾನವಾಗಿದೆ ಇದನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು. ನಂತರ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರು ಬೋರೇಗೌಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಮಮತಾ ಶೆಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮಂಗಳ ಊರಿನ ಮುಖಂಡರು ಶಿವಲಿಂಗಯ್ಯ ಮೇಲ್ವಿಚಾರಕಿ ರೂಪ ಸಂಘದ ಸದಸ್ಯರು ಮತ್ತು ಊರಿನ ಮುಖಂಡರು ಸೇವಾ ಪ್ರತಿನಿಧಿಗಳು ಹಾಜರಿದ್ದರು
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ