February 22, 2026

Newsnap Kannada

The World at your finger tips!

YADIYURAPPA1

2 ವರ್ಷ ನಾನೇ ಸಿಎಂ- ಅರುಣ್ ಸಿಂಗ್ ಹೇಳಿಕೆ ಬಲ ಬಂದಿದೆ‌ – ಸಿಎಂ ಯಡಿಯೂರಪ್ಪ

Spread the love

ನಮ್ಮ ಪಕ್ಷದ ರಾಜ್ಯ ಉಸ್ತುವಾರಿಗಳೇ ಮುಂದಿನ ಎರಡು ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ಅರುಣ್ ಸಿಂಗ್ ಈ ಮಾತಿನಿಂದ ನೂರಕ್ಕೆ ನೂರು ಬಲ ಬಂದಿದೆ.

ಹಾಸನದಲ್ಲಿ ಸಿಎಂ ಬಿಎಸ್​​ ಯಡಿಯೂರಪ್ಪ ಹೇಳಿಕೆ ನೀಡಿ ನಗರದಲ್ಲಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡುತ್ತಿರುವ ವಿಚಾರ ಕುರಿತು ವಿವರ ನೀಡಿದ ಸಿಎಂ, ಅರುಣ್ ಸಿಂಗ್ ರಾಜ್ಯದ ಉಸ್ತುವಾರಿ ಇರುವುದರಿಂದ ಬರುತ್ತಾರೆ ಎಂದರು.

ನಾನು ನಿಮಗೆ ಭರವಸೆ ಕೊಡುತ್ತೇನೆ. ಮುಂದಿನ ಉಳಿದಿರುವ ಎರಡು ವರ್ಷ ಮುಖ್ಯಮಂತ್ರಿ ಆಗಿ ಒಳ್ಳೆ ಕೆಲಸ ಮಾಡುವ ಭರವಸೆ ಕೊಡುತ್ತೇನೆ. ಪ್ರಧಾನಿಗಳು, ಅಮಿತ್‌ ಶಾ ಪ್ರೀತಿ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

error: Content is protected !!