November 28, 2024

Newsnap Kannada

The World at your finger tips!

somshekar

ಮನ್ ಮುಲ್ ನಲ್ಲಿ ಕೋಟ್ಯಾಂತರ ರು, ಅವ್ಯವಹಾರ : ಆಡಳಿತ ಮಂಡಳಿ ಸೂಪರ್ ಸೀಡ್ ? ಸಚಿವ ಸೋಮಶೇಖರ್

Spread the love

ಮಂಡ್ಯ ಹಾಲು ಒಕ್ಕೂಟದಲ್ಲಿ ಟ್ಯಾಂಕರ್ ನಲ್ಲೇ ನೀರು ಮಿಶ್ರಿತ ಹಾಲು ಪೂರೈಕೆಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಾಂತರ ರು. ಅವ್ಯವಹಾರದ ತನಿಖೆ ಕುರಿತಂತೆ ವರದಿ ಬಂದ ಬಳಿಕ ಆಡಳಿತ ಮಂಡಳಿ ಕೈವಾಡವಿದ್ದರೆ ಮುಲಾಜಿಲ್ಲದೇ ಸೂಪರ್ ಸೀಡ್ ಮಾಡುವ ಚಿಂತನೆಯನ್ನು ಸರ್ಕಾರಕ್ಕೆ ಮಾಡಿದೆ ಎಂದು ಸಹಕಾರ ಸಚಿವ
ಸೋಮಶೇಖರ್ ಗುರುವಾರ ತಿಳಿಸಿದರು.

ಮನ್‌ಮುಲ್ ಗೆ ಭೇಟಿ ಬಳಿಕ‌ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಸೋಮಶೇಖರ್ ಕೇವಲ ಸೂಪರ್ ಸೀಡ್ ಒಂದೇ ಅಲ್ಲ ನಿರ್ದೇಶಕರು ಇದರಲ್ಲಿ ಭಾಗಿಯಾಗಿದ್ದರೆ ಅವರಿಗೂ ಶಿಕ್ಷೆ
ಅಧಿಕಾರ ಕಿತ್ತು ಕೊಳ್ಳುವುದು ನಮ್ಮ ಯೋಚನೆ ಅಲ್ಲ ಎಂದರು.

ನೀರು ಮಿಶ್ರಿತ ಹಾಲು ಪೂರೈಕೆ ಪ್ರಕರಣದ ತನಿಖೆ ಲೇಟ್ ಆಗ್ತಿಲ್ಲ, ವ್ಯವಸ್ಥಿತವಾಗಿ ನಡೆಯುತ್ತಿದೆ.
ಪ್ರಾಥಮಿಕವಾಗಿ 6ಜನ ಅಧಿಕಾರಿಗಳ ಅಮಾನತು ಆಗಿದೆ ಎಂದರು.

ಸಹಕಾರ ಇಲಾಖೆಯ 64ರ ತನಿಖೆ ನಡೆಯುತ್ತಿದೆ, 2ದಿನದಲ್ಲಿ ವರದಿ ಬರಲಿದೆ. ಎಷ್ಟು ವರ್ಷದಿಂದ ಈ ಹಗರಣ ನಡೆದಿದೆ ಎಂಬುದನ್ನು ತಿಳಿಯಬೇಕು ಎಂದರು.

ಮನ್ ಮುಲ್ ನಲ್ಲಿ ನಡೆದಿದೆ ಎನ್ನಲಾದ ಎಲ್ಲಾ ಅವ್ಯವಹಾರ ಕುರಿತ ಮಾಹಿತಿಗಳನ್ನು ಸಿಎಂ ಗಮನಕ್ಕೆ ತಂದಿದ್ದೇನೆ
ಯಾರು ಎಷ್ಟೇ ಪ್ರಭಾವಿತರಿದ್ದರೂ ತಪ್ಪು ಎಸಗಿದರೆ ಶಿಕ್ಷೆಗೆ ಒಳಪಡಿಸಲು ಸಿಎಂ ಸೂಚಿಸಿದ್ದಾರೆ ಎಂದು ತಿಳಿಸಿದರು.

ರೈತರ ಸಂಸ್ಥೆಗೆ ಅನ್ಯಾಯವಾಗಬಾರದು:

ಎರಡು ಮೂರು ದಿನಗಳಲ್ಲಿ ಪ್ರಕರಣದ ಸಂಪೂರ್ಣ ವರದಿ ಬರಲಿದೆ. ಎಷ್ಟು ಕೋಟಿ ಲಾಸ್ ಆಗಿದೆ. ಕಾರಣ ಯಾರು, ಯಾರಿಂದ ವಸೂಲು ಮಾಡಬೇಕು ಎಂಬ ಬಗ್ಗೆ ಯೂ ಸಂಪೂರ್ಣ ವರದಿ ಬರುತ್ತದೆ ನಂತರ ಉನ್ನತ ತನಿಖೆಗೆ ಸೂಚಿಸಲಾಗುವುದು ಎಂದು ತಿಳಿಸಿದರು.

ಪೊಲೀಸ್ ಇಲಾಖೆಗೂ ಕಟ್ಟುನಿಟ್ಟಿನ ಆದೇಶ ಇದೆ. ಶೀಘ್ರ ಆರೋಪಿಗಳ ಬಂಧನವಾಗಲಿದೆ.‌ ಬೆಂಗಳೂರಿನಲ್ಲಿ ಇದೇ ರೀತಿ ಹಗರಣ ನಡೆದಿದೆ ಎಂಬ ಮಾತು ಕೇಳಿಬಂದಿತ್ತು ಅಲ್ಲಿ ಬ್ಲ್ಯಾಕ್ ಲಿಸ್ಟ್ ಮಾಡಿ ಕಳುಹಿಸಲಾಗಿದೆ‌. 14 ಒಕ್ಕೂಟಗಳಲ್ಲೂ ಟ್ಯಾಂಕರ್‌ಗಳ ಪರಿಶೀಲನೆ ನಡೆಸಲು ಚಿಂತನೆ
ಯಾವುದೇ ರಾಜಕೀಯ ಒತ್ತಡ ಇಲ್ಲ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!