ಫೇಸ್​​ಬುಕ್ ಕುಂದುಕೊರತೆ​ ಅಧಿಕಾರಿಯಾಗಿ ಸ್ಪೂರ್ತಿ ಪ್ರಿಯಾ ನೇಮಕ

Team Newsnap
1 Min Read
Fake Fb account, WhatsApp message in DC name; demanded money ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ, ವಾಟ್ಸಪ್ ಮೆಸೇಜ್; ಹಣಕ್ಕೆ ಕಿಡಿಗೇಡಿಗಳಿಂದ ಬೇಡಿಕೆ

ಕೇಂದ್ರ ಸರ್ಕಾರದ ಹೊಸ ನಿಯಮಗಳನ್ನು ಒಪ್ಪಿಕೊಂಡ ಸಾಮಾಜಿಕ ಜಾಲತಾಣದ ಫೇಸ್​​ಬುಕ್​ ಸಂಸ್ಥೆಗೆ ಭಾರತಕ್ಕೆ ತನ್ನ ಗ್ರೀವೆನ್ಸ್​​ ಅಧಿಕಾರಿ (ಕುಂದುಕೊರತೆ ಪರಿಹರಿಸುವ ಅಧಿಕಾರಿ)ಯಾಗಿ ಸ್ಫೂರ್ತಿ ಪ್ರಿಯಾ ಅವರನ್ನು ನೇಮಕ ಮಾಡಿದೆ.

ಈ ಕುರಿತು ಫೇಸ್​ಬುಕ್​ ತನ್ನ ವೆಬ್​​​ಸೈಟ್​​ನಲ್ಲಿ ಮಾಹಿತಿ ನೀಡಿ ಸರ್ಕಾರದ ಹೊಸ ನಿಯಮಗಳ ಪ್ರಕಾರ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ತಮ್ಮ ವೆಬ್‌ಸೈಟ್‌ನಲ್ಲಿ ಕುಂದುಕೊರತೆ ಅಧಿಕಾರಿಯ ಹೆಸರು ಮತ್ತು ಇತರ ಸಂಬಂಧಿತ ಮಾಹಿತಿಯನ್ನು ಸಹ ಪ್ರಕಟಿಸಬೇಕು.

ಈ ಮೂಲಕ ಬಳಕೆದಾರರು ಸುಲಭವಾಗಿ ಗ್ರೀವೆನ್ಸ್​ ಅಧಿಕಾರಿಯನ್ನು ಸಂಪರ್ಕಿಸಲು ಸಾಧ್ಯವಾಗುವಂತೆ ನೋಡಿಕೊಳ್ಳಬೇಕು.

  • 24 ಗಂಟೆಗಳ ಒಳಗೆ ದೂರನ್ನು ಅಂಗೀಕರಿಸಬೇಕು ಮತ್ತು ದೂರು ಸಲ್ಲಿಸಿದ ದಿನಾಂಕದಿಂದ 15 ದಿನಗಳ ಒಳಗೆ ಅದನ್ನ ವಿಲೇವಾರಿ ಮಾಡಬೇಕು. ಇದನ್ನು ಗ್ರೀವೆನ್ಸ್ ಅಧಿಕಾರಿ ನೋಡಿಕೊಳ್ಳತ್ತಾರೆ.‌
  • ಅಧಿಕಾರಿಗಳು ನೀಡುವ ಯಾವುದೇ ಆದೇಶ, ಸೂಚನೆ ಅಥವಾ ನಿರ್ದೇಶನವನ್ನು ಸ್ವೀಕರಿಸಿ ಅಂಗೀಕರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವ ಕಾರ್ಯವನ್ನು ಗ್ರೀವೆನ್ಸ್​ ಅಧಿಕಾರಿಗೆ ವಹಿಸಲಾಗಿದೆ.
Share This Article
Leave a comment