March 15, 2026

Newsnap Kannada

The World at your finger tips!

kaveri river

ಬೆಳಕವಾಡಿ ಸಮೀಪ ಕಪಿಲಾ – ಕಾವೇರಿ ಸಂಗಮದ ಬಳಿ ಇಂದು ಅನಾಥ ಅಸ್ಥಿ ವಿಸರ್ಜನೆಗೆ ಸಿದ್ದತೆ

Spread the love

ಬೆಂಗಳೂರಿನಲ್ಲಿ ಕೊರೊನಾದಿಂದ ಸಾವನ್ನಪ್ಪಿರುವವರ ಅಸ್ಥಿಗಳು ಅನಾಥವಾಗಿ ಬಿದ್ದಿರುವ ಅಸ್ಥಿಗಳಿಗೆ ಬುಧವಾರ ಕಾವೇರಿ ಮತ್ತು ಕಪಿಲ ನದಿಗಳ ಸಂಗಮ ಸ್ಥಳದಲ್ಲಿ ಸರ್ಕಾರದ ವತಿಯಿಂದ ಮುಕ್ತಿ ಕೊಡಲಾಗುವುದು.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆಳಕವಾಡಿ ಗ್ರಾಮದ ಬಳಿಯ ಕಾವೇರಿ ಮತ್ತು ಕಪಿಲ ನದಿಗಳು ಸಂಗಮವಾಗುವ ಸ್ಥಳದಲ್ಲಿ 857 ಅಸ್ಥಿಗಳನ್ನು ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಅಸ್ತಿಯನ್ನು ವಿಸರ್ಜನೆ ಮಾಡಲಾಗುತ್ತದೆ.

ಸಚಿವ ಆರ್.ಅಶೋಕ್ ಇಂದು 12.30ಕ್ಕೆ ವಿಸರ್ಜನೆ ಮಾಡಲಿದ್ದಾರೆ. ಬೆಳಕವಾಡಿಯಲ್ಲಿ ಅನಾಥ ಅಸ್ಥಿಗಳನ್ನು ವಿಧಿ-ವಿಧಾನದ ಮೂಲಕ ವಿಸರ್ಜನೆ ಮಾಡಲು ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

error: Content is protected !!