ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳು ಉದ್ಯಮಿಯೊಬ್ಬರಿಗೆ 36 ಲಕ್ಷ ರೂ. ವಂಚಿಸಿದ ಘಟನೆ ಬೆಂಗಳೂರಿನ ಹೆಚ್.ಎ.ಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕ್ವಾನ್’ಟೇಕ್ ಕನ್ಸಲ್ಟೆನ್ಸಿ ಕಂಪನಿಯ ಸಿಇಒ ಅನಂತ್ ಮಲ್ಯ ಮೋಸ ಹೋದ ಉದ್ಯಮಿ. ಅನಂತ್ ಮಲ್ಯ 2019ರ ಜೂನ್ ನಲ್ಲಿ ಯುವತಿಯೊಬ್ಬಳ ಪರಿಚಯವಾಗಿದೆ,
ನಂತರ ಇಬ್ಬರ ನಡುವೆ ಪ್ರೇಮ ಅಂಕುರವಾಗಿತ್ತು. ಮದುವೆ ಆಗುತ್ತೇನಿ ಅಂತ ನಂಬಿಸಿದ್ದ ಯುವತಿ ಸೈಟ್ ಖರೀದಿಸಲು ಅನಂತ್ ಮಲ್ಯ ಅವರ ಬಳಿ 36.22 ಲಕ್ಷ ಹಣ ಪಡೆದಿದ್ದಳು.
ಹಣ ಪಡೆದ ನಂತರ ಮಲ್ಯರನ್ನು ಅವೈಡ್ ಮಾಡಲು ಶುರು ಮಾಡಿದ್ದಾಳೆ. ಇಬ್ಬರ ನಡುವೆ ಜಗಳ ನಡೆದು ಕೊಟ್ಟ ಹಣವನ್ನು ವಾಪಸ್ಸು ಕೊಡಿ ಎಂದು ಕೇಳಿದ್ದಾರೆ.
36 ಲಕ್ಷ ಹಣದಲ್ಲಿ 6.90 ಲಕ್ಷ ಹಣವನ್ನು ಯುವತಿ ವಾಪಸ್ ಕೊಟ್ಟಿದ್ದಾಳೆ. ಉಳಿದ 29.40 ಲಕ್ಷ ರೂ ಮರಳಿಸದೇ ನಾಪತ್ತೆಯಾಗಿದ್ದಾಳೆ. ಅನಂತ್ ಮಲ್ಯ ಹೆಚ್ ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
- ಡಿ.9 ರಿಂದ ಬೆಳಗಾವಿಯಲ್ಲಿ ಅಧಿವೇಶನ : ಯು ಟಿ ಖಾದರ್
- ವಯನಾಡಿನ ನೂತನ ಸಂಸದೆಯಾಗಿ ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ
- ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿಚ್ಛೇದನಕ್ಕೆ ಕೋರ್ಟ್ ಅನುಮೋದನೆ
- ಬಾರ್ ಲೈಸೆನ್ಸ್ಗೆ 20 ಲಕ್ಷ ಲಂಚದ ಬೇಡಿಕೆ – ಅಬಕಾರಿ ಡಿಸಿ ವಿರುದ್ಧ ಲೋಕಾಯುಕ್ತಕ್ಕೆ ದೂರು
- ಕರ್ನಾಟಕದಲ್ಲಿ ಡಿಸೆಂಬರ್ 4ರ ತನಕ ಭಾರೀ ಮಳೆ ಮುನ್ಸೂಚನೆ
More Stories
ನವೆಂಬರ್ 28: ರಾಜ್ಯದ ಅಭಿವೃದ್ಧಿಗೆ ಮಹತ್ವದ ಸಚಿವ ಸಂಪುಟ ಸಭೆ
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ