February 22, 2026

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಕೊರೋನಾ ಇಳಿಮುಖ: 20,378 ಪಾಸಿಟಿವ್ ಪ್ರಕರಣ- 382 ಸಾವು : 28,053 ಡಿಸ್ಚಾರ್ಜ್

Spread the love

ರಾಜ್ಯದಲ್ಲಿ ಭಾನುವಾರ 20,378 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಸೋಂಕು ಪಸರಿಸುವ ಪ್ರಮಾಣ ಶೇ.14.68ರಷ್ಟಿದೆ. ಇಂದು ಮಹಾಮಾರಿಗೆ 382 ಜನ ಸಾವನ್ನಪ್ಪಿದ್ದಾರೆ.‌ 28,053 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸದ್ಯ 3,42,010 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಇದುವರೆಗೂ 25,87,827 ಕೊರೊನಾ ಪ್ರಕರಣಗಳು ದಾಖಲಾಗಿವೆ. 28,679 ಜನ ಸಾವನ್ನಪ್ಪಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.1.87ಕ್ಕೆ ಇಳಿಕೆಯಾಗಿದೆ. ಇವತ್ತು 1,38,809 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಬೆಂಗಳೂರಿನಲ್ಲಿ ಕೊರೊನಾ ಸಂಖ್ಯೆ ಇಳಿಕೆಯಾಗಿದೆ. ಕೇವಲ 4,734 ಜನಕ್ಕೆ ಸೋಂಕು ತಗುಲಿದೆ. ಇವತ್ತು 213 ಜನರು ಸಾವನ್ನಪ್ಪಿದ್ದಾರೆ. ಸದ್ಯ 1,62,625 ಸಕ್ರಿಯ ಪ್ರಕರಣಗಳಿವೆ. 6,078 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

covid 30 05
error: Content is protected !!