February 22, 2026

Newsnap Kannada

The World at your finger tips!

7816ef62 fee8 40ac ad9d dafd0a4e2495

ಹಿರಿಯ ಪೋಷಕ ನಟ, ರಂಗಕರ್ಮಿ ಕೃಷ್ಣೇ ಗೌಡ ನಿಧನ

Spread the love

ಹಿರಿಯ ರಂಗಭೂಮಿ ಕಲಾವಿದ, ಚಿತ್ರಗಳಲ್ಲಿ ವಿಶಿಷ್ಟ ಅಭಿನಯ ನೀಡಿ ತಮ್ಮದೇ ಛಾಪು ಮೂಡಿಸಿದ ಕೃಷ್ಣೇ ಗೌಡರು (80) ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು.

ಒಂದು ತಿಂಗಳ ಹಿಂದೆ ಕೊರೊನಾ ಪಾಸಿಟಿವ್​ ಬಂದು ಆಸ್ಪತ್ರೆ ಸೇರಿದ್ದ ಕೃಷ್ಣೇ ಗೌಡರಿಗೆ ಕೊರೊನಾ ವಾಸಿಯಾಗಿ ನೆಗೆಟಿವ್​ ದೃಢಪಟ್ಟಿತ್ತು.

ಕೊರೊನಾ ಸಂಪೂರ್ಣವಾಗಿ ಗುಣಮುಖವಾಗಿದ್ದರೂ ನಂತರ ಶ್ವಾಸಕೋಶದಲ್ಲಿ ಹೆಚ್ಚು ಇನ್ಫೆಕ್ಷನ್​ ಕಾಣಿಸಿಕೊಂಡಿದ್ದ ಕಾರಣ ಕೃಷ್ಣೇಗೌಡರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಆದರೆ ಇಂದು ಬೆಳಗಿನ ಜಾವ ಕೃಷ್ಣೇಗೌಡರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಹಲವಾರು ಚಿತ್ರ,ಧಾರಾವಾಹಿ ಹಾಗೂ ಸಾಕ್ಷ್ಯಚಿತ್ರ ಗಳಲ್ಲಿ ಅಭಿನಯಿಸಿರುವ ಕೃಷ್ಣೇ ಗೌಡರು, ಹಲವಾರು ವರ್ಷಗಳ ಕಾಲ ಚಲನ ಚಿತ್ರ ಕಲಾವಿದರ ಸಂಘದ ಖಜಾಂಚಿ ಆಗಿ ಸೇವೆ ಸಲ್ಲಿಸಿದ್ದರು.

error: Content is protected !!