February 22, 2026

Newsnap Kannada

The World at your finger tips!

daali

ಅಮೇರಿಕಾದ ವಿವಿದೆಡೆ ಗುಂಡಿನ ದಾಳಿ – 12 ಮಂದಿ ಸಾವು

Spread the love

ಅಮೆರಿಕದಲ್ಲಿ ವಿವಿದೆಡೆ ನಡೆದ ಗುಂಡಿನ ದಾಳಿಯಲ್ಲಿ 12 ಜನರು ಸಾವನ್ನಪ್ಪಿದ್ದಾರೆ. 50 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ನ್ಯೂಜೆರ್ಸಿ, ದಕ್ಷಿಣ ಕೆರೊಲಿನಾ, ಜಾರ್ಜಿಯಾ, ಓಹಿಯೋ ಮತ್ತು ಮಿನ್ನೆಸೋಟಾದಲ್ಲಿ ಸಂಭವಿಸಿದ ಗುಂಡಿನ ಘಟನೆಗಳಲ್ಲಿ ಈ ದುರಂತ ಸಾವು ಸಂಭವಿಸಿವೆ.

ನ್ಯೂಜೆರ್ಸಿಯ ಕ್ಯಾಮ್ಡೆನ್ ನಲ್ಲಿ ಶನಿವಾರ ರಾತ್ರಿ ನಡೆದ ಮನೆ ಪಾರ್ಟಿಯಲ್ಲಿ ಗುಂಡಿನ ದಾಳಿ ನಡೆದಾಗ ಇಬ್ಬರು ಮೃತಪಟ್ಟಿದ್ದು, ಕನಿಷ್ಠ 12 ಜನರು ಗಾಯಗೊಂಡಿದ್ದಾರೆ.

ದಕ್ಷಿಣ ಕೆರೊಲಿನಾದಲ್ಲಿ, ಸಂಗೀತ ಕಚೇರಿಯಲ್ಲಿ 14 ವರ್ಷದ ಬಾಲಕಿಯೊಬ್ಬಳು ಕೊಲ್ಲಲ್ಪಟ್ಟಳು ಮತ್ತು 14 ಜನರು ಗಾಯಗೊಂಡರು.

ಜಾರ್ಜಿಯಾದ ಅಟ್ಲಾಂಟಾದಲ್ಲಿ ಪೊಲೀಸರು ಗುಂಡು ಹಾರಿಸಿದ ಬಗ್ಗೆ ಕರೆಗೆ ಸ್ಪಂದಿಸಿದ ನಂತರ ಭಾನುವಾರ ಮುಂಜಾನೆ ಮೂವರು ಗುಂಡೇಟಿಗೆ ಬಲಿಯಾದವರನ್ನು ಪತ್ತೆ ಮಾಡಿದರು.

ಓಹಿಯೋದ ಯಂಗ್ಸ್ ಟೌನ್ ನ ಬಾರ್ ನ ಹೊರಗೆ ಭಾನುವಾರ ಮುಂಜಾನೆ ಇತರ ಮೂವರು ಮೃತಪಟ್ಟು, ಎಂಟು ಜನರು ಗಾಯಗೊಂಡರೆ, ಕೊಲಂಬಸ್ ನ ಉದ್ಯಾನವನದಲ್ಲಿ 16 ವರ್ಷದ ಬಾಲಕಿ ಮೃತಪಟ್ಟು ಏಳು ಜನರು ಗಾಯಗೊಂಡಿದ್ದಾರೆ.

error: Content is protected !!