February 22, 2026

Newsnap Kannada

The World at your finger tips!

karona

ರಾಜ್ಯದಲ್ಲಿ ಶನಿವಾರ 31, 183 ಮಂದಿಗೆ ಪಾಸಿಟಿವ್- 451 ಸಾವು

Spread the love

ರಾಜ್ಯದಲ್ಲಿ ಶನಿವಾರ 31,183 ಮಂದಿಗೆ ಕೊರೊನಾ ಸೋಂಕಿರುವುದು ದೃಢವಾಗಿದೆ. 451 ಮಂದಿ ದುರಂತ ಸಾವನ್ನಪ್ಪಿದ್ದಾರೆ. ಇಂದು 61,766 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.‌ಈವರೆಗೆ 18,91,042 ಮಂದಿ ಗುಣಮುಖರಾದಂತಾಗಿದೆ.

ಇಂದು 451 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿರುವುದು‌ ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 24,658ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 5,34,954 ಆ್ಯಕ್ಟಿವ್ ಪ್ರಕರಣಗಳಿವೆ.

ರಾಜ್ಯದಲ್ಲಿ ಇಂದು 17,526 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,11,235 ಆರ್​ಟಿಪಿಸಿಆರ್​ ಟೆಸ್ಟ್​ಗಳು ಸೇರಿದಂತೆ ಒಟ್ಟು 1,28,761 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ.

ಈ ಪೈಕಿ ಇಂದು 31,183 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 23,98,925ಕ್ಕೆ ಏರಿಕೆಯಾಗಿದೆ.

ಬೆಂಗಳೂರು ಒಂದರಲ್ಲೇ 8214 ಹೊಸ ಪ್ರಕರಣಗಳು ದಾಖಲಾಗಿ, 200 ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಬಾಗಲಕೋಟೆ 285
ಬಳ್ಳಾರಿ 2,157
ಬೆಳಗಾವಿ 1,026
ಬೆಂಗಳೂರು ಗ್ರಾಮಾಂತರ 716
ಬೆಂಗಳೂರು ನಗರ 8,214
ಬೀದರ್ 58
ಚಾಮರಾಜನಗರ 412
ಚಿಕ್ಕಬಳ್ಳಾಪುರ 720
ಚಿಕ್ಕಮಗಳೂರು 652
ಚಿತ್ರದುರ್ಗ 722
ದಕ್ಷಿಣಕನ್ನಡ 913
ದಾವಣಗೆರೆ 478
ಧಾರವಾಡ 973
ಗದಗ 443
ಹಾಸನ 1,641
ಹಾವೇರಿ 342
ಕಲಬುರಗಿ 277
ಕೊಡಗು 345
ಕೋಲಾರ 708
ಕೊಪ್ಪಳ 377
ಮಂಡ್ಯ 798
ಮೈಸೂರು 2526 ರಾಯಚೂರು 584
ರಾಮನಗರ 335
ಶಿವಮೊಗ್ಗ 971
ತುಮಕೂರು 1,545
ಉಡುಪಿ 849
ಉತ್ತರಕನ್ನಡ 1,357
ವಿಜಯಪುರ 437
ಯಾದಗಿರಿ 322

error: Content is protected !!