November 27, 2024

Newsnap Kannada

The World at your finger tips!

2gd

ಕೊರೋನಾ ರಾಮಬಾಣ : 2 ಡಿಆಕ್ಸಿ-ಡಿ-ಗ್ಲುಕೋಸ್ ಪೌಡರ್ ಬಳಕೆ ವಿಧಾನ ಪರಿಣಾಮ, ಬೆಲೆ ಬಗ್ಗೆ ಒಂದಷ್ಟು ಮಾಹಿತಿ

Spread the love

ಕೊರೋನಾ ದೇಶೀ ಔಷಧ
2-ಡಿಆಕ್ಸಿ-ಡಿ-ಗ್ಲುಕೋಸ್(2-ಡಿಜಿ) ಹೆಸರಿನ ಪೌಡರ್ ಅನ್ನು ಇಂದು
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಆರೋಗ್ಯ ಸಚಿವ ಹರ್ಷವರ್ಧನ್ ನವದೆಹಲಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಕುರಿತಂತೆ ಒಂದಷ್ಟು ಮಾಹಿತಿ ಇಲ್ಲಿದೆ.

ಔಷಧಿಯ ವಿವರ :
  • ಹೈದರಾಬಾದಿನ ಡಾ.ರೆಡ್ಡೀಸ್ ಲ್ಯಾಬ್ ಸಹಯೋಗದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಅಭಿವೃದ್ಧಿ ಪಡಿಸಿರುವ ಕೋವಿಡ್ ಔಷಧ 2-ಡಿಆಕ್ಸಿ-ಡಿ-ಗ್ಲುಕೋಸ್(2-ಡಿಜಿ) ಹೆಸರಿನ ಪೌಡರ್ ಅನ್ನು ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ(ಡಿಜಿಸಿಐ) ವಾರದ ಹಿಂದೆ ಅನುಮೋದನೆ ನೀಡಿತ್ತು.
ಬಳಕೆ ಹೇಗೆ?
  • ಈ ಪೌಡರ್ ಅನ್ನು ನೀರಿನಲ್ಲಿ ಕಲಕಿ ಸೇವಿಸಬಹುದು. ಕ್ಲಿನಿಕಲ್ ಪ್ರಯೋಗದ ವೇಳೆ ಈ ಪೌಡರ್ ಸೇವಿಸಿದ ಸೋಂಕಿತರು ಆಸ್ಪತ್ರೆಯಿಂದ ಬಹಳ ಬೇಗ ಚೇತರಿಕೆ ಕಾಣುತ್ತಿದ್ದಾರೆ.

ಪ್ರತಿದಿನ 2 ಪ್ಯಾಕ್ 2ಜಿಡಿ ಔಷಧ ಪಡೆದ ಶೇ.42ರಷ್ಟು ರೋಗಿಗಳು ಕೇವಲ 3 ದಿನದಲ್ಲಿ ಆಕ್ಸಿಜನ್ ಸಪೋರ್ಟ್ ನಿಂದ ಹೊರ ಬಂದಿದ್ದಾರೆ.

ಎಷ್ಟು ಪರಿಣಾಮಕಾರಿ?
  • ಈ ಔಷಧ ಕೊರೊನಾ ವೈರಸ್ ಅನ್ನು ಕೊಲ್ಲುವುದಿಲ್ಲ. ವೈರಸ್ ಜೀವಕೋಶದ ಒಳಗಡೆ ಸಂಗ್ರಹವಾಗಿ ವೈರಸ್ ದ್ವಿಗುಣಗೊಳ್ಳುವುದನ್ನು ತಡೆದು ಆದರ ಶಕ್ತಿಯನ್ನು ಕುಂಠಿತಗೊಳಿಸುತ್ತದೆ.
    ಅಲ್ಲದೇ ವೈರಸ್ ಬೆಳವಣಿಗೆಯನ್ನು ತಡೆಯುತ್ತದೆ.
ಬೆಲೆ ಎಷ್ಟು ಗೊತ್ತಾ?

ಈ ಪೌಡರ್ ಬೆಲೆ ಕಡಿಮೆ ಇರಲಿದೆ ಎಂದು ವರದಿಯಾಗಿದೆ. ಒಂದು ಪ್ಯಾಕ್ ಬೆಲೆ 500 – 600 ರೂ. ದರ ಇರಬಹುದು ಎಂದು ಅಂದಾಜಿಸಲಾಗಿದೆ.

  • ಈ ಔಷಧಿ ಸದ್ಯಕ್ಕೆ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಾಗಲಿದೆ.
Copyright © All rights reserved Newsnap | Newsever by AF themes.
error: Content is protected !!