February 24, 2026

Newsnap Kannada

The World at your finger tips!

mysore person

ಮೈಸೂರು ಮೂಲದ ಭೂ ಕಂದಾಯ ಅಧಿಕಾರಿ ಬೀದರ್ ನಲ್ಲಿ ದಿಢೀರ್ ಸಾವು

Spread the love

ಬೀದರ್ ನ ಭೂ ಕಂದಾಯ ವಿಭಾಗದ ಸಹಾಯಕ ನಿರ್ದೇಶಕ 32 ವರ್ಷದ ಯುವ ಅಧಿಕಾರಿ ಮೈಸೂರಿನ ರವಿಕುಮಾರ್ ಕೊರೊನಾಗೆ ಬಲಿಯಾಗಿದ್ದಾರೆ.

ಕಳೆದ ಒಂದು ವಾರದಿಂದ ಇಲ್ಲಿನ ಬ್ರಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಹಂತಕ್ಕೆ ಬಂದ ವೇಳೆ ದಿಢೀರ್ ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಇಲ್ಲಿನ ಡಿಸಿ ಕಚೇರಿಯ ಭೂ ಕಂದಾಯ ವಿಭಾಗದಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ‌ ಮೂಲತಃ ಮೈಸೂರಿನವರು.‌ ಮೃತದೇಹವನ್ನು ಮೈಸೂರಿಗೆ ರವಾನಿಸಲಾಗಿದೆ.

ರವಿಕುಮಾರ್ ಚೇತರಿಸಿಕೊಂಡಿದ್ದರು. ಹೀಗಾಗಿ ಆಕ್ಸಿಜನ್ ಸಹ ತೆಗೆಯಲಾಗಿತ್ತು. ಆದರೆ ನಿನ್ನೆ ಬೆಳಗ್ಗೆ ಇವರಿಗೆ ಅಚಾನಕ್ ಮೆದುಳಿನಲ್ಲಿ ರಕ್ತ ಹೆಪ್ಪು ಗಟ್ಡಿದ್ದರಿಂದ ಕೋಮಾಗೆ ಜಾರಿ ರಾತ್ರಿ ಕೊನೆಯುಸಿರೆಳೆದ್ದಾರೆ.

error: Content is protected !!