February 24, 2026

Newsnap Kannada

The World at your finger tips!

karona medisan

ಕೊರೋನಾ ನಿಯಂತ್ರಣ ಸಂಜೀವಿನಿ:2-ಡಿಯೋಕ್ಸಿ-ಡಿ-ಗ್ಲುಕೋಸ್ (2-ಡಿಜಿ)ಔಷಧಿ ಇಂದು ಬಿಡುಗಡೆ

Spread the love

ಕೋವಿಡ್-19 ಚಿಕಿತ್ಸೆಗಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಅಭಿವೃದ್ಧಿಪಡಿಸಿದ 2-ಡಿಯೋಕ್ಸಿ-ಡಿ-ಗ್ಲುಕೋಸ್ (2-ಡಿಜಿ) ಔಷಧದ ಮೊದಲ ಬ್ಯಾಚ್ ಅನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಬಿಡುಗಡೆ ಮಾಡಲಿದ್ದಾರೆ.

ಆಸ್ಪತ್ರೆಗಳು ಸೋಮವಾರದಿಂದ ಔಷಧದ ಪೂರೈಕೆಯನ್ನು ಸ್ವೀಕರಿಸಲು ಪ್ರಾರಂಭಿಸುತ್ತವೆ.

ಮೊದಲು ದೆಹಲಿಯ ವಿವಿಧ ಆಸ್ಪತ್ರೆಗಳಿಗೆ ಸುಮಾರು 10 ಸಾವಿರ ಡೋಸ್ ಗಳನ್ನು ಪೂರೈಸಲಾಗುವುದು.

ಭಾರತೀಯ ಔಷಧ ನಿಯಂತ್ರಣ ಜನರಲ್ ( ಡಿಸಿಜಿಐ) ಮೇ.8ರಂದು 2-ಡಿಜಿ ಔಷಧ ಬಳಕೆಗೆ ಅನುಮತಿ ನೀಡಿತ್ತು. ಕೊರೋನಾ ನಿಯಂತ್ರಣ ಸಂಜೀವಿನಿ ಔಷಧ ಇಂದು ಬಿಡುಗಡೆ ಆಗಲಿದೆ.

error: Content is protected !!