ಚಾಮರಾಜನಗರ ಆಕ್ಸಿಜನ್ ದುರಂತ : ಡಿಸಿ ರೋಹಿಣಿಗೆ ಕ್ಲೀನ್ ಚಿಟ್ – ಡಿಸಿ ರವಿ ತಪ್ಪಿತಸ್ಥರು – ಸಮಿತಿ ವರದಿ

Team Newsnap
1 Min Read
Rohini Sindhuri's husband Sudhir grab land in Yalahanka? Complaint via tweet to DGP ರೋಹಿಣಿ ಸಿಂಧೂರಿ ಪತಿ ಸುಧೀರ್ ಯಲಹಂಕದಲ್ಲಿ ಭೂ ಕಬಳಿಕೆ ? ಡಿಜಿಪಿಗೆ ಟ್ವೀಟ್ ಮೂಲಕ ದೂರು

ಚಾಮರಾಜನಗರ ಜಿಲ್ಲಾ ಆಸ್ಪತ್ರೆ ಆಕ್ಸಿಜನ್ ದುರಂತ ಪ್ರಕರಣದಲ್ಲಿ ಡಿಸಿ ಎಂ ಆರ್ ರವಿ ತಪ್ಪಿತಸ್ಥರು ಹಾಗೂ ಮೈಸೂರು ಡಿಸಿ ರೋಹಿಣಿ ಸಿಂಧೂರಿಗೆ ಕ್ಲೀನ್ ಚಿಟ್ ನೀಡಲಾಗಿದೆ.

ಹೈಕೋರ್ಟ್ ನಿವೃತ್ತ ನ್ಯಾ. ಎ ಎನ್ ವೇಣುಗೋಪಾಲ್ ಗೌಡ ನೇತೃತ್ವದ ಕಾನೂನು ಸೇವೆಗಳ ಪ್ರಾಧಿಕಾರದ ಸಮಿತಿಯು ರಾಜ್ಯ ಹೈಕೋರ್ಟ್ ಗೆ ಸಲ್ಲಿಸಿದ ವಿಚಾರಣಾ ವರದಿಯಲ್ಲಿ ರೋಹಿಣಿ ಸಿಂಧೂರಿಗೆ ಕ್ಲೀನ್ ಚಿಟ್ ನೀಡಿದೆ.

kannada.thenewsnap.com 14

ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಮೇ2 ರಿಂದ ಮೇ 3 ಮಧ್ಯರಾತ್ರಿವರೆಗೆ
24 ಜನರ ಸಾವನ್ನಪ್ಪಿದ ಪ್ರಕರಣಕ್ಕೆ ಆಕ್ಸಿಜನ್ ಕೊರತೆ ಕಾರಣ. ಅಲ್ಲದೇ ಚಾಮರಾಜನಗರ ಡಿಸಿ ನಿರ್ಲಕ್ಷ್ಯ ದಿಂದ ಈ ದುರಂತ ಸಂಭವಿಸಿದೆ. ಮೈಸೂರು ಡಿಸಿ ರೋಹಿಣಿ ಸಿಂಧೂರಿ ಯಾವುದೇ ತಪ್ಪಿತಸ್ಥರಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ‌
ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ತುರ್ತು ವೇಳೆಯಲ್ಲಿ ಮೈಸೂರು ಜಿಲ್ಲಾಡಳಿತ ಸೂಕ್ತ ಸ್ಪಂದನೆ ನೀಡಲಿಲ್ಲ. ಮೇ 2 ರ ಸಂಜೆ ವೇಳೆಗೆ 100 ಆಕ್ಸಿಜನ್ ಸಿಲಿಂಡರ್ ಬೇಕಾಗಿತ್ತು. ಸಕಾಲದಲ್ಲಿ ಸರಬರಾಜು ಮಾಡುವುದನ್ನು ಡಿಸಿ ರೋಹಿಣಿ ತಡೆಹಿಡಿದರು ಎಂದು ಡಿಸಿ ಎಂ ಆರ್ ರವಿ ಮಾಡಿರುವ ಆರೋಪಕ್ಕೆ ಯಾವುದೇ ಪುರಾವೆ ಗಳಿಲ್ಲ ಎಂದು ವರದಿ ಹೇಳಿದೆ. ಅಲ್ಲದೇ ನಾಯಕತ್ವ ಮತ್ತು ಕ್ರಿಯಾಶೀಲತೆ ತೋರುವಲ್ಲಿ ರವಿ ವಿಫಲರಾಗಿದ್ದಾರೆಂದು ದೂರಲಾಗಿದೆ.‌

ಈ ಪ್ರಕರಣದಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಸಮಿತಿ ಸೂಚಿಸಿದೆ.‌

Share This Article
Leave a comment