2-18 ವರ್ಷದವರಿಗೆ ಕೋವ್ಯಾಕ್ಸಿನ್ ಲಸಿಕೆ ಕ್ಲಿನಿಕಲ್ ಟ್ರಯಲ್​ಗೆ ಓಕೆ ಎಂದ ಕೇಂದ್ರ

Team Newsnap
1 Min Read

ಸ್ವದೇಶಿ ಕೋವ್ಯಾಕ್ಸಿನ್​ ಲಸಿಕೆಯನ್ನು ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್​ ಟ್ರಯಲ್​​ನಲ್ಲಿ 2 ರಿಂದ 18 ವರ್ಷ ವಯಸ್ಸಿನವರ ಮೇಲೆ ಪ್ರಯೋಗ ಮಾಡಲು, ತಜ್ಞರ ಸಮಿತಿ ಶಿಫಾರಸ್ಸು ಮಾಡಿದೆ.

ಹೈದರಾಬಾದ್​ ಮೂಲದ ಭಾರತ್​ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಯನ್ನ 18 ವರ್ಷ ಮೇಲ್ಪಟ್ಟವರಿಗೆ ನೀಡಲು ಈಗಾಗಲೇ ತುರ್ತು ಬಳಕೆ ಅನುಮತಿ ಸಿಕ್ಕಿದೆ.

ಈಗ ಮಕ್ಕಳ ಮೇಲೆ ಲಸಿಕೆಯ ಪರಿಣಾಮಕಾರಿತ್ವವನ್ನ ತಿಳಿದುಕೊಳ್ಳಲು ಟ್ರಯಲ್ ನಡೆಸಲಾಗುತ್ತದೆ.

2ರಿಂದ 18 ವರ್ಷ ನಡುವಿನ ವಯಸ್ಸಿನವರ ಮೇಲೆ ಕೋವ್ಯಾಕ್ಸಿನ್ ಲಸಿಕೆಯ ಸುರಕ್ಷತೆ, ಪ್ರತಿಕ್ರಿಯಾತ್ಮಕತೆ ಮತ್ತು ಪ್ರತಿರೋಧಕ ಶಕ್ತಿಯನ್ನು ತಿಳಿದುಕೊಳ್ಳಲು ಎರಡು/ಮೂರನೇ ಹಂತದ  ಪ್ರಯೋಗ ನಡೆಸಲು ಅನುಮತಿ ಕೋರಲಾಗಿತ್ತು.‌

ಈ ಕುರಿತ ವಿಷಯ ತಜ್ಞರ ಸಮಿತಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿ, ಸಂಸ್ಥೆಗೆ ಅನುಮತಿ ನೀಡಿದೆ ಅಂತ ತಿಳಿದುಬಂದಿದೆ.

Share This Article
Leave a comment