ಮಂಡ್ಯಕ್ಕೆ 4 ವಾರಗಳಲ್ಲಿ ಆಕ್ಸಿಜನ್ ಘಟಕ : ಸಂಸದೆ ಸುಮಲತಾಗೆ ಆರೋಗ್ಯ ಸಚಿವರ ಭರವಸೆ‌

Team Newsnap
1 Min Read
Sumaltha's entry into state politics? ರಾಜ್ಯ ರಾಜಕಾಣಕ್ಕೆ ಸುಮಲತಾ ಎಂಟ್ರಿ?

ಮಂಡ್ಯ ಜಿಲ್ಲೆಗೆ ಮುಂದಿನ ಮೂರು – ನಾಲ್ಕು ವಾರಗಳಲ್ಲಿ ಆಕ್ಸಿಜನ್ ಘಟಕ ಮಾಡಿಕೊಡುವ ಭರವಸೆಯನ್ನು ರಾಜ್ಯ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ನೀಡಿರುವುದಾಗಿ ಸಂಸದೆ ಸುಮಲತಾ ಹೇಳಿದ್ದಾರೆ.

ಸಚಿವ ಕೆ ಸುಧಾಕರ್ ಭೇಟಿಯ ಬಳಿಕ ಮಾತನಾಡಿದ ಸಂಸದೆ ಸುಮಲತಾ
ಸಚಿವರೊಂದಿಗೆ ಮಂಡ್ಯ ಜಿಲ್ಲೆ ಕೋವಿಡ್ ಸಮಸ್ಯೆ ಹಾಗೂ ಪರಿಹಾರ ಕುರಿತು ಚರ್ಚೆ ಮಾಡಿದ್ದೇವೆ ಎಂದರು.‌ಇರೋ ಪೇಶೆಂಟ್ಸ್ ಗೆ ಆಕ್ಸಿಜನ್ ಇದೆ..

ಜಿಲ್ಲೆಯಲ್ಲಿ‌ ಕರೋನಾ ರೋಗಿಗಳ ಸಂಖ್ಯೆ ಏರಿಕೆ ಆಗುತ್ತಿದೆ. ಬೆಡ್ಸ್ ಕೊರತೆ ಇದೆ ಆಕ್ಸಿಜನ್ ಅಗತ್ಯವೂ ಇದೆ, ಎಂಬ ಅಂಶವನ್ನು ಸಚಿವರ ಗಮನಕ್ಕೆ ತಂದಿರುವುದಾಗಿ ಹೇಳಿದರು.

ಸಧ್ಯದಲ್ಲೇ ಮಂಡ್ಯ ಮತ್ತು ಮಳವಳ್ಳಿಯಲ್ಲಿ ಆಕ್ಸಿಜನ್ ಜನರೇಟರ್ಸ್ ಮಾಡಿ ತಕ್ಷಣದ ಸಮಸ್ಯೆ ಗಳಿಗೆ ಪರಿಹಾರ ಕೊಡುವ ಭರವಸೆ ನೀಡಿದ್ದಾರೆಂದು ಸಂಸದೆ ಹೇಳಿದರು. ‌

ಸಧ್ಯಕ್ಕೆ ಸ್ವಲ್ಪ ವ್ಯಾಕ್ಸಿನ್ ಕೊರತೆ ಇದೆ.
ಎರಡನೇ ಡೋಸ್ ನವರಿಗೆ ಮೊದಲ ಆಧ್ಯತೆ ಕೊಡುತ್ತೇವೆ. ಬಳಿಕ ವ್ಯಾಕ್ಸಿನ್ ಬಂದ ಮೇಲೆ 18 ರಿಂದ 45 ವಯೋಮಾನದವರಿಗೆ ಮೊದಲ ಡೋಸ್ ಕೂಡ ಕೊಡುವುದಾಗಿ ಸಚಿವರು ಹೇಳಿದ್ದಾರೆಂದರು.

ಸಧ್ಯ ಇಡೀ ದೇಶದಲ್ಲೇ ಈ ಸಮಸ್ಯೆ ಇದೆ
ನಮ್ಮ ಕರ್ನಾಟಕದಲ್ಲಿ ಸ್ವಲ್ಪ ಕೇಸ್ ಜಾಸ್ತಿಯಾಗುತ್ತಿದೆ. ನಾನು ಪ್ರಧಾನಿ ಕಾರ್ಯಲಯಕ್ಕೆ ಪತ್ರ ಬರೆದಿದ್ದೇನೆ. ಆದಷ್ಟು ಬೇಗ ಆಕ್ಸಿಜನ್ ಸರಬರಾಜು ಮಾಡಲಾಗುತ್ತದೆ ಎಂದರು.

Share This Article
Leave a comment