ಸಿಎಂ ಯಡಿಯೂರಪ್ಪ ನವರ ಸ್ಥಾನ ಪಲ್ಲಟಕ್ಕೆ ಬಿಜೆಪಿ ವೇದಿಕೆ ಸಜ್ಜು ?

Team Newsnap
1 Min Read

ಬಿಜೆಪಿ ರಾಜಕಾರಣದಲ್ಲಿ ತಳಮಳ ಶುರುವಾಗಿದೆ. ಕೊರೋನಾ ಎರಡನೇ ಅಲೆ ಕೊಂಚ ತಹಬದಿಗೆ ಬಂದ ಮೇಲೆ ಸಿಎಂ ಯಡಿಯೂರಪ್ಪ ಅವರ ಸ್ಥಾನ ಪಲ್ಲಟ ಮಾಡಿ , ಪುದುಚೇರಿ ರಾಜ್ಯ ಪಾಲರ ಹುದ್ದೆಗೆ ನೇಮಕ ಮಾಡುವ ಕುರಿತು ಲೆಕ್ಕಾಚಾರ ಹಾಕಿರುವ ಬಿಜೆಪಿ ಹೈಕಮಾಂಡ್, ಈ ಬದಲಾವಣೆಗೆ ವೇದಿಕೆ ಸಜ್ಜು ಮಾಡುತ್ತಿದೆ.‌

ಕಳೆದ ವಾರ ಸಿಎಂ ಪುತ್ರ ವಿಜಯೇಂದ್ರ ಹಾಗೂ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದ ಹೈಕಮಾಂಡ್ ನಾಯಕರು, ಯಡಿಯೂರಪ್ಪನವರ ಬದಲಾವಣೆಗೆ ಪೀಠಿಕೆ ಹಾಕಿ, ಲೆಕ್ಕಾಚಾರದ ತಂತ್ರಗಳ ಬಗ್ಗೆ ಮಾತುಕತೆ ವೇಳೆ ಎಲ್ಲವನ್ನೂ ಹೇಳಿ ಕಳುಹಿಸಿದ್ದಾರೆ.

ಅದೇ ಅಭಿಪ್ರಾಯವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ವ್ಯಕ್ತಪಡಿಸಿ, ರಾಜ್ಯ ಬಿಜೆಪಿ ಬದಲಾವಣೆಗೆ ನೀವು ಸಜ್ಜಾಗಿ ಎಂದು ವಿಜಯೇಂದ್ರ ಹಾಗೂ ಸಚಿವ ಬೊಮ್ಮಾಯಿ ಅವರಿಗೆ ಒತ್ತಾಯಪೂರಕವಾದ ನಿಲುವುಗಳ ಬಗ್ಗೆ ಹೇಳಿದ್ದಾರೆ ಎಂದು ಗೊತ್ತಾಗಿದೆ. ‌

ಈ ರಾಜಕೀಯ ಬೆಳವಣಿಗೆ ಬಗ್ಗೆ ಸಮಗ್ರವಾಗಿ ಚರ್ಚೆ ಮಾಡಲು ಸಿಎಂ ಯಡಿಯೂರಪ್ಪ ನಾಳೆ ದೆಹಲಿಗೆ ತೆರಳಿದ್ದಾರೆ. ಹೈಕಮಾಂಡ್ ನಾಯಕರ ಜೊತೆಗೆ ಸಮಾಲೋಚನೆ ಮಾಡಿ ಮುಂದಿನ‌ ನಿರ್ಧಾರ ಮಾಡಲಿದ್ದಾರೆ.

ಬದಲಾವಣೆಗಳು ಏನೇನು? :

  • ಸಿಎಂ ಯಡಿಯೂರಪ್ಪ ಅವರನ್ನು ‌ಪಾಂಡಿಚೇರಿ ರಾಜ್ಯಪಾಲರಾಗಿ‌ ನೇಮಕ ಮಾಡಲಾಗುವುದು.
  • ಯಡಿಯೂರಪ್ಪನವರಿಂದ ತೆರವಾಗುವ ಸಿಎಂ ಸ್ಥಾನಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತಂದು ಕೂರಿಸುವುದು.
  • ಲಿಂಗಾಯತ ಸಮುದಾಯದ ಬಲವನ್ನು ಉಳಿಸಿಕೊಳ್ಳಲು ಬಿ ವೈ ವಿಜಯೇಂದ್ರ ಅವರನ್ನು ಉಪಮುಖ್ಯ ಮಂತ್ರಿ ಮಾಡುವುದು.
  • ಸಚಿವ ಸೋಮಣ್ಣ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಡಿಸಿಎಂ ಹುದ್ದೆಗೆ ಭಾರಿ ಪ್ರಯತ್ನ ನಡೆಸಿದ್ದಾರಂತೆ.
  • ಡಾ ಅಶ್ವತ್ಥ್ ನಾರಾಯಣ ಅವರು ಈಗಿರುವ ಡಿಸಿಎಂ ಹುದ್ದೆ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ ಎಂದು ಗೊತ್ತಾಗಿದೆ.
  • ಈ ಎಲ್ಲಾ ಬೆಳವಣಿಗೆಗಳು ಕೊರೋನಾ ಅಲೆ ಒಂದು ಹಂತಕ್ಕೆ ಬಂದ ಮೇಲೆ ಆರಂಭವಾಗುತ್ತವೆ.
Share This Article
Leave a comment