ಕಾಡಿನ ರಾಜ ಎಂದೇ ಖ್ಯಾತಿಯಾಗಿದ್ದ ಮಂಡ್ಯದ ಹಿರಿಯ ಪತ್ರಕರ್ತ, ವನಸುಮ ಪತ್ರಿಕೆಯ ಸಂಪಾದಕ ಆರ್.ಎಲ್. ವಾಸುದೇವರಾವ್ ರಾಳೇಕರ್(88) ಭಾನುವಾರ ಬೆಳಗ್ಗೆ ನಿಧನರಾದರು.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ವಾಸುದೇವರಾವ್ ಇಂದು ಬೆಳಿಗ್ಗೆ 7.30 ರ ಸಮಯದಲ್ಲಿ ತಮ್ಮ ಮನೆಯಲ್ಲೇ ಕೊನೆಯುಸಿರೆಳೆದರು. ಇವರಿಗೆ ಒಬ್ಬ ಪುತ್ರ ಹಾಗೂ ಪುತ್ರಿ ಇದ್ದಾರೆ.
ಕಳೆದ 53 ವರ್ಷಗಳಿಂದ ವನಸುಮ ಪತ್ರಿಕೆಯನ್ನು ನಡೆಸಿಕೊಂಡು ಬಂದಿರುವ ವಾಸುದೇವ್ ರಾವ್ ಅರಣ್ಯ ಮತ್ತು ಪರಿಸರ ಪ್ರವಾಸೋದ್ಯಮಕ್ಕೆ ತಮ್ಮ ಪತ್ರಿಕೆ ಪ್ರಥಮ ಆದ್ಯತೆ ನೀಡಿದ್ದರು. ಮಂಡ್ಯ ಜಿಲ್ಲಾ ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷರಾಗಿಯೂ ಇವರು ಕೆಲಸ ಮಾಡಿದ್ದಾರೆ.
ಅರ್ಧ ಶತಮಾನಗಳಿಗೂ ಹೆಚ್ಚು ಕಾಲ ಅರಣ್ಯ ಮತ್ತು ಪ್ರವಾಸೋದ್ಯಮ ವಿಷಯ ಕುರಿತು ಪತ್ರಿಕೋದ್ಯಮ ನಡೆಸಿಕೊಂಡು ಬಂದ ವಾಸುದೇವ ರಾವ್ ಅರಣ್ಯ ಇಲಾಖೆ ವಲಯದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದರು. ವನಸುಮಾ ಎಂದರೆ ವಾಸುದೇವ ರಾವ್ , ವಾಸುದೇವ ರಾವ್ ಎಂದರೆ ವನಸುಮಾ ಎನ್ನುವಷ್ಟು ಫೇಮಸ್ ಹಾಗೂ ಪರಿಸರ ಕಾಳಜಿ ಪತ್ರಕರ್ತ ರಾಗಿದ್ದರು.
ವಾಸುದೇವ್ ರಾವ್ ನಿಧನಕ್ಕೆ ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ನವೀನ್ ಚಿಕ್ಕ ಮಂಡ್ಯ , ಹಿರಿಯ ಪತ್ರಕರ್ತ ರಾದ ಪಿ ಜೆ ಚೈತನ್ಯ ಕುಮಾರ್, ಕೆ ಎನ್ ರವಿ , ಕೆ ಸಿ ಮಂಜುನಾಥ್, ಶಿವಪ್ರಕಾಶ್,ಮತ್ತೀಕೆರೆ ಜಯರಾಂ , ಕೃಷ್ಣ ಸ್ವರ್ಣ ಸಂದ್ರ, ಡಿ ಎಲ್ ಲಿಂಗರಾಜು. ಬಿ ಪಿ ಪ್ರಕಾಶ್, ಸೇರಿದಂತೆ ಅನೇಕ ಹಿರಿ ಕಿರಿಯ ಪತ್ರಕರ್ತರು ಸಂತಾಪ ಸೂಚಿಸಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ