ನಿಯಂತ್ರಣ ತಪ್ಪಿದ ಚೀನಾ ರಾಕೆಟ್: ಈ ವಾರ ಭೂಮಿಗೆ ಅಪ್ಪಳಿಸಲಿದೆ

Team Newsnap
1 Min Read

ಚೀನಾದ ಬೃಹತ್​ ರಾಕೆಟ್​​ನ ಭಗ್ನಾವಶೇಷವು ಈ ವಾರಾಂತ್ಯದಲ್ಲಿ ಭೂಮಿಗೆ ಬಂದು ಅಪ್ಪಳಿಸುವ ಸಾಧ್ಯತೆ ಇದೆ.

ಭಗ್ನಾವಶೇಷಗಳು ಭೂಮಿಯ ಮೇಲ್ಮೈಗೆ ಅಪ್ಪಳಿಸುವುದರಿಂದ ಯಾವುದೇ ಅಪಾಯ ಇಲ್ಲ. ಭಯಭೀತರಾಗುವ ಅಗತ್ಯವಿಲ್ಲ.

ಭಗ್ನಾವಶೇಷಗಳ ಬಹು ಭಾಗವು ಭೂಮಿಯ ವಾತಾವರಣಕ್ಕೆ ಬರುತ್ತಿದ್ದಂತೆ ನಾಶವಾಗುತ್ತದೆ. ಆದರೆ ಕೆಲವೊಂದು ಅಪರೂಪದ ಪ್ರಕರಣದಲ್ಲಿ ದೊಡ್ಡ ಭಗ್ನಾವಶೇಷಗಳು ಭೂಮಿಗೆ ಬಂದು ಅಪ್ಪಳಿಸಬಹುದು.

ರಕ್ಷಣಾ ಇಲಾಖೆ ವಕ್ತಾರ ಮೈಕ್​ ಹೊವಾರ್ಡ್​, ಚೀನಾದ ಲಾಂಗ್​ ಮಾರ್ಚ್ 5 ಬಿ ರಾಕೆಟ್​​​ ಮೇ 8ನೇ ಒಳಗೆ ಭೂಮಿಯ ವಾತಾವರಣವನ್ನು ಪ್ರವೇಶಿಸುವ ನಿರೀಕ್ಷೆಯಿದೆ.

ಭಗ್ನಾವಶೇಷ ಎಲ್ಲಿ ಬಂದು ಅಪ್ಪಳಿಸಲಿದೆ ಅನ್ನೋದನ್ನ ಈಗಾಗಲೇ ನಿಖರವಾಗಿ ಹೇಳೋದು ಕಷ್ಟ

ಮೇ 8 ಹಾಗೂ 10 ರೊಳಗಾಗಿ ಮತ್ತೊಮ್ಮೆ ಪ್ರವೇಶಿಸಬಹುದು ಎಂದು ನಿರೀಕ್ಷಿಸಲಾಗಿದೆ. ಈ ಎರಡು ದಿನಗಳ ಅವಧಿಯಲ್ಲಿ ಅದು ಪ್ರಪಂಚದಾದ್ಯಂತ 30 ಬಾರಿ ಪರ್ಯಟನೆ ಮಾಡಬಹುದು. ಈ ಭಗ್ನಾವಶೇಷವು ಪ್ರತಿ ಗಂಟೆಗೆ 18 ಸಾವಿರ ಮೈಲಿ ದೂರದಲ್ಲಿ ಪ್ರಯಾಣ ಮಾಡುತ್ತದೆ ಎಂದು ಸಹ ಹೊವಾರ್ಡ್ ಹೇಳಿದ್ದಾರೆ.

Share This Article
Leave a comment