February 24, 2026

Newsnap Kannada

The World at your finger tips!

kannada.thenewsnap.com 1

ಚಾಮರಾಜನಗರ ದುರಂತ; ನನ್ನ ತಪ್ಪು ಏನೂ ಇಲ್ಲ – ಭಾವುಕರಾದ ಡಿಸಿ ರೋಹಿಣಿ ಸಿಂಧೂರಿ

Spread the love

ಚಾಮರಾಜನಗರದ 24 ಜನರ ಸಾವಿನ‌‌ ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದ್ದೇನೆ ಎಂದು ಮೈಸೂರು ಡಿಸಿ ರೋಹಿಣಿ ಸಿಂಧೂರಿ ಭಾವುಕರಾಗಿ ಹೇಳಿದರು.

ಮೈಸೂರಿನಿಂದ ಚಾಮರಾಜನಗರಕ್ಕೆ ಆಕ್ಸಿಜನ್ ‌ಸರಬರಾಜು ಮಾಡಿಲ್ಲ‌ ಎಂಬ ಆಪಾದನೆ ಸರಿ ಇಲ್ಲ, ಕಳೆದ ಮೂರು ದಿನದ ಹಿಂದೆಯೇ 40 ಆಕ್ಸಿಜನ್ ಸರಬರಾಜು ಮಾಡಲಾಗಿದೆ. ಆಕ್ಸಿಜನ್ ಸರಬರಾಜಿಗೆ ಸಂಬಂಧಿಸಿದಂತೆ ದಾಖಲಾತಿಯನ್ನು ತನಿಖಾಧಿಕಾರಿಗೆ ನೀಡಲಾಗುವುದು.‌

ತುಂಬಾ ಶ್ರಮಪಟ್ಟು ಕೆಲಸ ಮಾಡಿದ್ದೇವೆ. ಆಧಾರರಹಿತ ಆರೋಪ ಸಲ್ಲದು. ಈಗ ತನಿಖೆ ನಡೆಯುತ್ತಿದೆ. ಸತ್ಯ ಹೊರ ಬಂದಾಗ ತಪ್ಪು ಯಾರು ಮಾಡಿದ್ದಾರೆಂಬುದು ಗೊತ್ತಾಗುತ್ತದೆ ಎಂದರು‌

error: Content is protected !!