February 22, 2026

Newsnap Kannada

The World at your finger tips!

gogle

ಭಾರತಕ್ಕೆ ಕೊರೋನಾ ಎದುರಿಸಲು ಗೂಗಲ್ ನಿಂದ 135 ಕೋಟಿ ರು ನೆರವು

Spread the love

ಕೊರೊನಾ ವಿರುದ್ಧ ಹೋರಾಡಲು ಭಾರತಕ್ಕೆ 135 ಕೋಟಿ ರು ನೆರವು ನೀಡಲು ಗೂಗಲ್ ನಿರ್ಧಾರ ಮಾಡಿದೆ.

ಕೋವಿಡ್​ ಎರಡನೇ ಅಲೆಗೆ ಭಾರತ ತತ್ತರಿಸುತ್ತಿದ್ದು, ಹಲವು ದೇಶಗಳು ಹಾಗೂ ವಿದೇಶಿ ಸಂಸ್ಥೆಗಳು ಭಾರತಕ್ಕೆ ಸಹಾಯ ನೀಡಲು ಮುಂದಾಗಿವೆ.

ಗೂಗಲ್​ ಸಿಇಒ ಸುಂದರ್​ ಪಿಚ್ಚೈ ಕೂಡ ಭಾರತಕ್ಕೆ ಕೋವಿಡ್​ ಯುದ್ದ ಎದುರಿಸಲು ಸಹಾಯ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವಿಟ್​ ಮೂಲಕ ಮಾಹಿತಿ ಹಂಚಿಕೊಂಡಿರುವ ಪಿಚ್ಚೈ , ಭಾರತವು ಕೋವಿಡ್​ ಮಹಾಸಮರವನ್ನು ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಗೂಗಲ್​ 135 ಕೋಟಿ ರು ಹಣವನ್ನು ಯೂನಿಸೆಫ್​ಗೆ ನೀಡುವ ಮೂಲಕ ಭಾರತಕ್ಕೆ ನೀಡಲಿದೆ.

ಭಾರತಕ್ಕೆ ಅಗತ್ಯವಿರುವ ಲಸಿಕೆ, ಆಕ್ಸಿಜನ್​ ಮುಂತಾದ ವೈದ್ಯಕೀಯ ಸೌಲಭ್ಯಗಳಿಗೆ ನಾವು ನೆರವಾಗಲಿದ್ದೇವೆ ಎಂದಿದ್ದಾರೆ.

error: Content is protected !!