February 22, 2026

Newsnap Kannada

The World at your finger tips!

r ashwin ipl

ಐಪಿಎಲ್ ಟೂರ್ನಿಯಿಂದ ಆರ್. ಅಶ್ವಿನ್ ಹೊರಗೆ ಬರುವ ನಿರ್ಧಾರ

Spread the love

ತಮ್ಮ ಕುಟುಂಬದ ಸದಸ್ಯರು ಕೊರೊನಾ ಸೋಂಕಿಗೆ ಒಳಗಾಗಿ ತೀವ್ರ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ನಾನು ಐಪಿಎಲ್ ಟೂರ್ನಿ ಯಿಂದ ಹಿಂದೆ ಸರಿಯುವುದಾಗಿ ಸ್ಪಿನ್ನರ್ ಮಾಂತ್ರಿಕ ಆರ್ ಅಶ್ವಿನ್ ಟ್ವಿಟರ್ ನಲ್ಲಿ ಹೇಳಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದ ಸಂತಸದಲ್ಲಿದ್ದ ಡೆಲ್ಲಿ ತಂಡಕ್ಕೆ ಅಶ್ವಿನ್ ನಿರ್ಧಾರ ಶಾಕ್ ನೀಡಿದೆ.

ನಾನು ನಾಳೆಯಿಂದ ಐಪಿಎಲ್ ಆಡುತ್ತಿಲ್ಲ. ನನ್ನ ಕುಟುಂಬ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದೆ. ಈ ಸಂಕಷ್ಟದಲ್ಲಿ ಅವರ ಜೊತೆ ನಾನಿರಬೇಕು. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾದ್ರೆ ಮತ್ತೆ ಅಂಗಳಕ್ಕೆ ಬರಲಿದ್ದೇನೆ ಎಂದು ಅಶ್ವಿನ್ ಟ್ವೀಟ್ ಮೂಲಕ ಆಟದಿಂದ ದೂರ ಉಳಿಯುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

error: Content is protected !!