February 23, 2026

Newsnap Kannada

The World at your finger tips!

poison bottle

ನಿಶ್ಚಿತಾರ್ಥದ ನಂತರ ಪ್ರಿಯತಮನ ಜೊತೆ ವಿಷ ಸೇವಿಸಿ ಯುವತಿ ಆತ್ಮಹತ್ಯೆ

Spread the love

ಮನೆಯವರಿಂದ ಪ್ರೀತಿಗೆ ತೀವ್ರ ವಿರೋಧ ನಡುವೆಯೂ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಯುವತಿ ತನ್ನ ಪ್ರಿಯತಮನೊಂದಿಗೆ ವಿಷ ಸೇವಿಸಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಘಟನೆ ಹಾವೇರಿ ಜಿಲ್ಲೆಯ ನಾಗನೂರು ಗ್ರಾಮದಲ್ಲಿ ಭಾನುವಾರ ಜರುಗಿದೆ.

ಇರ್ಷಾದ್ (23) ವಿದ್ಯಾಶ್ರೀ (22) ಆತ್ಮಹತ್ಯೆ ಮಾಡಿಕೊಂಡವರು.‌

ವಿದ್ಯಾಶ್ರೀ , ಇರ್ಷಾದ್ ಬಹುವಾಗಿ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಕುಟುಂಬದವರ ವಿರೋಧವಿತ್ತು. ಇದೇ ವೇಳೆ ಮನೆಯವರೆಲ್ಲರೂ ಸೇರಿ ಬೇರೊಬ್ಬ ಯುವಕನೊಂದಿಗೆ ವಿದ್ಯಾಶ್ರೀಗೆ ನಿಶ್ಚಿತಾರ್ಥ ಮಾಡಿದ್ದರು.

ಯುವತಿ ನಿಶ್ಚಿತಾರ್ಥ ಮುಗಿದ ಬೆನ್ನಲ್ಲೇ ಇರ್ಷಾದ್ ಜೊತೆ ಪರಾರಿಯಾಗಿದ್ದಳು.‌ ಮಗಳು ನಾಪತ್ತೆಯಾಗಿದ್ದಾಳೆ ಎಂದು ಕುಟುಂಬಸ್ಥರು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಆದರೆ ಇರ್ಷಾದ್ ಹಾಗೂ ವಿದ್ಯಾಶ್ರೀ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇರ್ಷಾದ್ ಜಮೀನಿನಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ.

error: Content is protected !!