ಕೊರೋನಾ 2ನೇ ಅಲೆ ಎದುರಿಸಲು ಮಾನಸಿಕ ಸ್ಥೈರ್ಯ, ಆತ್ಮವಿಶ್ವಾಸ ಮುಖ್ಯ – ಪ್ರಧಾನಿ ಮೋದಿ

Team Newsnap
1 Min Read

ದೇಶದಲ್ಲಿ ಕೊರೊನಾ ವೈರಸ್ 1 ನೇ ಅಲೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರಿಂದ ಮಾನಸಿಕ ಸ್ಥೈರ್ಯ, ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು

ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ಸೋಂಕು ಧೈರ್ಯದ ಪರೀಕ್ಷೆ ಮಾಡುತ್ತಿದೆ. ಜನರು ತಮ್ಮವರನ್ನು ಕಳೆದುಕೊಳ್ಳುತ್ತಿದ್ದಾರೆ. ದೇಶದಲ್ಲಿ 1 ನೇ ಅಲೆಯನ್ನು ನಿಭಾಯಿಸದ್ದೇವೆ, ಹೀಗಾಗಿ ಮಾನಸಿಕ ಸ್ಥೈರ್ಯ, ಆತ್ಮವಿಶ್ವಾಸ ಹೆಚ್ಚಿಸಿದೆ ಎಂದರು.

ಕೊರೊನಾ ಲಸಿಕೆ ಕುರಿತಂತೆ ಊಹಾಪೋಹಗಳನ್ನು ನಂಬಬೇಡಿ, ವಿಶ್ವಾಸಾರ್ಹ ಸುದ್ದಿಗಳನ್ನು ಮಾತ್ರ ನಂಬಿ. ಎಲ್ಲರಿಗೂ ಲಸಿಕೆ ಮಹತ್ವದ ಬಗ್ಗೆ ತಿಳಿಯುತ್ತಿದೆ. ಉಚಿತ ಲಸಿಕೆ ಕಾರ್ಯಕ್ರಮ ಜಾರಿಗೆ ಬರಲಿದೆ.‌ ರಾಜ್ಯಗಳು ಲಸಿಕೆ ಸೌಲಭ್ಯ ಜನರಿಗೆ ತಲುಪಿಸಲಿ. 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರದ ಉಚಿತ ಲಸಿಕೆ ಯೋಜನೆ ಮುಂದುವರಿಯಲಿದೆ. ಮೇ. 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತೆ. ಲಸಿಕೆಯ ಮಹತ್ವದ ತಜ್ಞರ ಸಲಹೆಗಳನ್ನು ಪಾಲಿಸಬೇಕು ಎಂದರು.

ದೇಶವು ಎರಡನೇ ಅಲೆಯಿಂದ ಕೊಚ್ಚಿಹೋಗಿರುವ ಸಮಯದಲ್ಲಿ, ಈ ಕಷ್ಟದ ಸಮಯಗಳನ್ನು ಎದುರಿಸಲು ಸಕಾರಾತ್ಮಕ ಮನೋಭಾವವು ಬಹಳ ಮುಖ್ಯವಾಗಿದೆ. ಭಾರತ ಸರ್ಕಾರದ ಉಚಿತ ಲಸಿಕೆ ಕಾರ್ಯಕ್ರಮ ವು ಭವಿಷ್ಯದಲ್ಲಿಯೂ ಮುಂದುವರಿಯುತ್ತದೆ. ಈ ಉಚಿತ ಲಸಿಕೆ ಕಾರ್ಯಕ್ರಮದ ಪ್ರಯೋಜನಗಳು ಸಾಧ್ಯವಾದಷ್ಟು ಜನರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ನಾನು ರಾಜ್ಯಗಳನ್ನು ವಿನಂತಿಸುತ್ತೇನೆ ಎಂದರು.

Share This Article
Leave a comment