ಮುಂದಿನ 15 ದಿನಗಳ ಕಾಲ ಬೆಂಗಳೂರು ನಗರವನ್ನು ಸಂಪೂರ್ಣವಾಗಿ ಲಾಕ್‍ಡೌನ್ ಮಾಡಿ.
- ಇದು ಸರ್ಕಾರಕ್ಕೆ ತಜ್ಞರು ನೀಡಿರುವ ಮಹತ್ವದ ಸಲಹೆ. ವೀಕೆಂಡ್ ಲಾಕ್‍ಡೌನ್ ಸೋಮವಾರ ಬೆಳಗ್ಗೆ 6 ಗಂಟೆಗೆ ಅಂತ್ಯವಾಗಲಿದೆ. ಆದರೆ ಎರಡು ವಾರ ಲಾಕ್‍ಡೌನ್ ಮಾಡದೆ ಹೋದರೆ ಕೊರೊನಾ ನಿಯಂತ್ರಣ ಅಸಾಧ್ಯ. ಕೊರೊನಾ ಕ್ಷಣ ಕ್ಷಣಕ್ಕೂ ಭೀಕರ ಸ್ವರೂಪ ಪಡೆದುಕೊಳ್ಳುತ್ತಿದೆ. ಕೇವಲ ವೀಕೆಂಡ್ ಲಾಕ್ ಮಾಡಿ ಇನ್ನುಳಿದ ದಿನಗಳನ್ನು ಫ್ರೀ ಆಗಿ ಬಿಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಜ್ಙರು ಎಚ್ಚರಿಕೆ ನೀಡಿದ್ದಾರೆ ಅವಶ್ಯಕತೆ ಇದ್ದರೆ ಲಾಕ್‍ಡೌನ್ ಮಾಡಬಹುದು ಎಂದು ಪ್ರಧಾನಿಗಳು ಹೇಳಿದ್ದಾರೆ. ಸದ್ಯ ಬೆಂಗಳೂರಿಗೆ ಲಾಕ್‍ಡೌನ್ ಅತ್ಯವಶ್ಯಕವಾಗಿದೆ. ಸರ್ಕಾರ ತಡಮಾಡದೇ ವಾರಂತ್ಯದ ಲಾಕ್‍ಡೌನ್ ವಾರದ ದಿನಗಳಲ್ಲಿ ಮುಂದುವರಿಸಬೇಕೆಂದು ತಜ್ಞರ ತಂಡ ಒತ್ತಾಯಿಸಿದೆ.
ಗಂಟೆಗೆ 700 ಜನಕ್ಕೆ ಕೊರೊನಾ:
ಪ್ರತಿ ಒಂದು ಗಂಟೆಗೆ ಅಂದಾಜು 700 ಜನಕ್ಕೆ ಕೊರೊನಾ ಸೋಂಕು ದೃಢವಾಗುತ್ತಿದೆ.
ಮಾರ್ಚ್ ನಲ್ಲಿ 42 ಜನರಿಗೆ ಪ್ರತಿ ಗಂಟೆಗೊಮ್ಮೆ ಪಾಸಿಟಿವ್ ಬರುತ್ತಿತ್ತು. ಈಗ ಈ ಸಂಖ್ಯೆ ವೇಗವಾಗಿ ಸಾಗುತ್ತಿದೆ. ಓರ್ವ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿ ಕನಿಷ್ಠ 10 ಜನರು ಜನರು ಇರ್ತಾರೆ. ಈ ವೇಗ ಹೀಗೆ ಮುಂದುವರಿದರೆ ಕೊರೊನಾ ಇಡೀ ಬೆಂಗಳೂರು ನಗರವನ್ನು ವ್ಯಾಪಿಸಿಕೊಳ್ಳಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
- ಕರ್ನಾಟಕದಲ್ಲಿ ಡಿಸೆಂಬರ್ 4ರ ತನಕ ಭಾರೀ ಮಳೆ ಮುನ್ಸೂಚನೆ
- RBI ಗವರ್ನರ್ ಶಕ್ತಿಕಾಂತ ದಾಸ್ ಆಸ್ಪತ್ರೆಗೆ ದಾಖಲು: ಆರೋಗ್ಯದಲ್ಲಿ ಚೇತರಿಕೆ
- ಮುಡಾ ಹಗರಣ: ಡಿ.10ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
- ಏಕನಾಥ್ ಶಿಂಧೆ ರಾಜೀನಾಮೆ: ದೇವರ ಮೊರೆ ಹೋದ ಬೆಂಬಲಿಗರು, ಮಹಾಯತಿ ಸರ್ಕಾರ ರಚನೆಗೆ ತಯಾರಿ
- ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಸರ್ಕಾರಿ ಶಾಲಾ ಶಿಕ್ಷಕನ ಬಂಧನ
More Stories
ನವೆಂಬರ್ 28: ರಾಜ್ಯದ ಅಭಿವೃದ್ಧಿಗೆ ಮಹತ್ವದ ಸಚಿವ ಸಂಪುಟ ಸಭೆ
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ