February 23, 2026

Newsnap Kannada

The World at your finger tips!

shanthna g

ಸುಪ್ರೀಂ ಕೋಟ್೯ ನ್ಯಾ. ಶಾಂತನಗೌಡರ ಹೃದಯಾಘಾತದಿಂದ ನಿಧನ

Spread the love

ಕರ್ನಾಟಕ ಮೂಲದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್ (63) ಹೃದಯಾಘಾತದಿಂದ ನಿಧನರಾದರು.

ನ್ಯಾ. ಶಾಂತನಗೌಡರ್ ಅವರು ಹಲವು ದಿನಗಳಿಂದ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದರು. ನಿನ್ನೆ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ದಿಢೀರನೆ ಸಾಯಂಕಾಲ ಏಳೂವರೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ದೆಹಲಿ ಸಮೀಪದ ಗುರುಗಾಂವ್​ನ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಶಾಂತನಗೌಡರ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಸುಪ್ರೀಂಕೋರ್ಟ್​ನ ಅಸಿಸ್ಟೆಂಟ್ ರೆಸಿಸ್ಟ್ರಾರ್ ಗಗನ್ ಸೋನಿ ಅಧಿಕೃತ ಮಾಹಿತಿ ನೀಡಿದ್ದಾರೆ.

ಶಾಂತನಗೌಡರ್ ಮೂಲತಃ ಹಾವೇರಿ ಜಿಲ್ಲೆಯ ಹಿರೇಕೆರೂರ್ ತಾಲೂಕಿನ ಚಿಕ್ಕೇರೂರಿನವರು. ಅವರು ಆರಂಭದಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದರು. ನಂತರ 2003ರಲ್ಲಿ ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಿಸಲಾಗಿತ್ತು. ಸೆಪ್ಟೆಂಬರ್ 29, 2004ರಲ್ಲಿ ಕರ್ನಾಟಕ ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 22 ಸೆಪ್ಟೆಂಬರ್ 2016ರಲ್ಲಿ ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಬಳಿಕ 2017ರಲ್ಲಿ ಸುಪ್ರೀಂಕೋರ್ಟ್​ ನ್ಯಾಯಮೂರ್ತಿಯಾಗಿ ನೇಮಕಗೊಂಡರು.

error: Content is protected !!