ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅಮ್ಮ ಕೊರೊನಾಗೆ ಬಲಿಯಾಗಿದ್ದಾರೆ.
ವೇದಾ ತಾಯಿ ಚೆಲುವಾಂಬ (67) ನಾಲ್ಕು ದಿನಗಳ ಹಿಂದೆ ಏಪ್ರಿಲ್ 20ರಿಂದು ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆ ದಾಖಲಾಗಿದ್ದರು.ಕೊರೊನಾ ವರದಿಯಲ್ಲಿ ಪಾಸಿಟಿವ್ ಬಂದಿತ್ತು.
ಕಳೆದ ನಾಲ್ಕು ದಿನಗಳಿಂದಲೂ ಹೋಂ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೆಲುವಾಂಬ ಅವರಿಗೆ ಕಳೆದ ರಾತ್ರಿ ಉಸಿರಾಟದ ಸಮಸ್ಯೆ ಎದುರಾಗಿತ್ತು.

ಕೂಡಲೇ ಅವರನ್ನು ಕಡೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಚೆಲುವಾಂಬ ಅವರ ಮೃತದೇಹವನ್ನು ಮನೆಯವರು ತಮ್ಮ ವಶಕ್ಕೆ ನೀಡುವಂತೆ ಕೇಳಿದ್ದರು. ಆದರೆ ತಾಲೂಕು ಆಡಳಿತ ಕೊರೊನಾದಿಂದ ಸಾವನ್ನಪ್ಪಿರುವ ಕಾರಣ ಮೃತದೇಹವನ್ನು ನೀಡೋದಕ್ಕೆ ಸಾಧ್ಯವಿಲ್ಲ. ಮೃತ ಚೆಲುವಾಂಬ ಮನೆಯವರು ಎಲ್ಲಿ ಹೇಳುತ್ತಾರೆ ಅಲ್ಲೆಯೇ ತಾಲೂಕು ಆಡಳಿತದ ವತಿಯಿಂದಲೇ ಕೊರೊನಾ ಗೈಡ್ ಲೈನ್ ಮೂಲಕವೇ ಅಂತ್ಯ ಸಂಸ್ಕಾರ ನಡೆಸಲು ತಯಾರಿ ನಡೆಸಿದೆ.
ಕಡೂರು ತಾಲೂಕಿನ ಬೀರೂರು ರಸ್ತೆಯಲ್ಲಿ ವೇದಾ ಅವರ ಜಮೀನಿನಲ್ಲೇ ತಾಲೂಕು ಆಡಳಿತದ ವತಿಯಿಂದ ಅಂತ್ಯ ಸಂಸ್ಕಾರ ಮಾಡಲಾಗಿದೆ.
ಕ್ರಿಕೆಟರ್ ವೇದಾ ತಂದೆ ಕೃಷ್ಣಮೂರ್ತಿ ಕೇಬಲ್ ಆಪರೇಟರ್ ಆಗಿದ್ದಾರೆ. ನಿವೃತ್ತ ಸೈನಿಕ ಕೂಡ. ವೇದಾಗೆ ಅಕ್ಕ ಹಾಗೂ ತಮ್ಮನಿದ್ದಾನೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ