ಬೆಂಗಳೂರು: ಶನಿವಾರ, ಭಾನುವಾರ ಮೆಟ್ರೋ ಸೇವೆ ರದ್ದು – ಮೇ 4ರ ವರೆಗೆ ಪರಿಷ್ಕೃತ ವೇಳಾ ಪಟ್ಟಿ

Team Newsnap
1 Min Read
pic credits: livemint.com

ರಾಜ್ಯದಲ್ಲಿ ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ರಾತ್ರಿ ಕರ್ಪ್ಯೂ ಹಾಗೂ ವಾರಾಂತ್ಯ ಕರ್ಪ್ಯೂ ಈ ರಾತ್ರಿ ಯಿಂದ ಜಾರಿಯಾಗಲಿದೆ.

ಸೋಮವಾರದಿಂದ ಶುಕ್ರವಾರದವರೆಗಿನ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 7.30ವರೆಗೆ ನಮ್ಮ ಮೆಟ್ರೋ ಸಂಚಾರಿಸಲಿದೆ.

ಆದರೆ ವೀಕ್ ಎಂಡ್ ಕರ್ಪ್ಯೂನಿಂದಾಗಿ ಶನಿವಾರ ಮತ್ತು ಭಾನುವಾರದಂದು ಮೆಟ್ರೋ ರೈಲು ಸೇವೆಯನ್ನು ರದ್ದು ಪಡಿಸಲಾಗಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(ಬಿಎಂಆರ್ ಸಿ ಎಲ್) ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಬೆಂಗಳೂರು ನಗರದಲ್ಲಿ ಕರ್ಪ್ಯೂ ಜಾರಿಯಲ್ಲಿ ಇರುವುದರಿಂದ ಮೆಟ್ರೋ ರೈಲು ಕಾರ್ಯಾಚರಣೆಯ ವೇಳಾಪಟ್ಟಿಯನ್ನು ಮೇ4 ರ ವರೆಗೆ ಪರಿಷ್ಕರಿಸಲಾಗಿದೆ.

ಪರಿಷ್ಕೃತ ವೇಳಾಪಟ್ಟಿ ಹೀಗಿದೆ:

ನಮ್ಮ ಮೆಟ್ರೋ ಸಂಚಾರದ ಪರಿಷ್ಕೃತ ವೇಳಾಪಟ್ಟಿ

  • ಸೋಮವಾರದಿಂದ ಶುಕ್ರವಾರದವರೆಗಿನ ಎಲ್ಲಾ ವಾರದ ದಿನಗಳಲ್ಲಿ – ಮೆಟ್ರೋ ಲೈರು ಸೇವೆಗಳು ಎಂದಿನಂತೆ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತದೆ.
  • ಟರ್ಮಿನಲ್ ನಿಲ್ದಾಣಗಳಾದ ನಾಗಸಂದ್ರ, ರೇಷ್ಮೆ ಸಂಸ್ಥೆ, ಮೈಸೂರು ರಸ್ತೆ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳಿಂದ ಕೊನೆಯ ರೈಲು ಸೇವೆ ಸಂಜೆ 7.30ಕ್ಕೆ ಹೊರಡಲಿದೆ.
  • ಕೊನೆಯ ವಾಣಿಜ್ಯ ಸೇವೆಯು ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ನಿಂದ ಇತರೆ ನಾಲ್ಕು ಮಾರ್ಗಗಳಿಗೆ ಸಂಪರ್ಕವಿರುತ್ತದೆ.
  • ಶನಿವಾರ ಮತ್ತು ಭಾನುವಾರದಂದು ವಾರಾಂತ್ಯದ ಕರ್ಪ್ಯೂ ಕಾರಣದಿಂದ ಮೆಟ್ರೋ ರೈಲು ಸೇವೆಗಳನ್ನು ಎರಡು ದಿನಗಳಂದು ಇಡೀ ದಿನ ರದ್ದುಗೊಳಿಸಲಾಗುತ್ತದೆ.
Share This Article
Leave a comment