ದೇಶದಲ್ಲಿ ಕೊರೊನಾ ರೋಗಿಗಳಿಗೆ ಅಗತ್ಯವಾಗಿರುವ ಆಕ್ಸಿಜನ್ ಪೂರೈಕೆಗೆ ಕೇಂದ್ರ ಸರ್ಕಾರ ಇಂಡಿಯನ್ ಏರ್ ಫೋಸ್೯ ನ ವಿಮಾನ ಬಳಕೆ ಮಾಡಲು ನಿರ್ಧರಿಸಿದೆ.
ಈಗಾಗಲೇ ಕ್ರಯೋಜೆನಿಕ್ ಟ್ಯಾಂಕ್ಗಳ ಮೂಲಕ ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆ ಮಾಡಲು ಭಾರತೀಯ ರೇಲ್ವೆ ಆಕ್ಸಿಜನ್ ಎಕ್ಸ್ಪ್ರೆಸ್ ಎಂಬ ವಿಶೇಷ ರೈಲು ಸೇವೆ ಆರಂಭಿಸಿದೆ.
ಕಳೆದ ರಾತ್ರಿ ಮೊದಲ ಆಕ್ಸಿಜನ್ ಎಕ್ಸ್ಪ್ರೆಸ್ ವೈಜಾಗ್ನಿಂದ ಮಹಾರಾಷ್ಟ್ರದತ್ತ ತೆರಳಿದೆ. ಇದೀಗ ಆಕ್ಸಿಜನ್ ಟ್ಯಾಂಕ್ಗಳನ್ನ ಫಿಲ್ಲಿಂಗ್ ಸ್ಟೇಷನ್ಗಳಿಗೆ ಕೊಂಡೊಯ್ಯಲು ಭಾರತೀಯ ವಾಯುಪಡೆ ನೆರವಿಗೆ ಧಾವಿಸಿದೆ.
ಐಎಎಫ್ ವಿಮಾನಗಳ ಮೂಲಕ ಖಾಲಿ ಕ್ರಯೋಜೆನಿಕ್ ಆಕ್ಸಿಜನ್ ಟ್ಯಾಂಕರ್ಗಳನ್ನ ಏರ್ಲಿಫ್ಟ್ ಮಾಡಲಾಗಿದೆ. ಎರಡು ಐಎಎಫ್ C-17 ವಿಮಾನಗಳು ಹಾಗೂ ಒಂದು IL-76 ವಿಮಾನದ ಮೂಲಕ ನಿನ್ನೆ ಪಾನಾಘಡದಿಂದ ಆಕ್ಸಿಜನ್ ಕಂಟೇನರ್ಗಳನ್ನು ಕಳುಹಿಸಿಕೊಡಲಾಗಿದೆ.
ವೈದ್ಯಕೀಯ ಸಿಬ್ಬಂದಿ, ಉಪಕರಣಗಳು ಹಾಗೂ ಔಷಧಿಗಳನ್ನು ದೇಶಾದ್ಯಂತ ಕೋವಿಡ್ ಆಸ್ಪತ್ರೆಗಳಿಗೆ ರವಾನಿಸಲು ಐಎಎಫ್ ನೆರವಾಗುತ್ತಿದೆ.
More Stories
ನವೆಂಬರ್ 28: ರಾಜ್ಯದ ಅಭಿವೃದ್ಧಿಗೆ ಮಹತ್ವದ ಸಚಿವ ಸಂಪುಟ ಸಭೆ
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ