February 24, 2026

Newsnap Kannada

The World at your finger tips!

m sd

ಮುಂಬೈನ ಕೋವಿಡ್ ಕೇರ್ ಆಸ್ಪತ್ರೆಯಲ್ಲಿ ಬೆಂಕಿ ಅನಾಹುತ : 13 ಮಂದಿ‌ ಸಜೀವ ದಹನ‌

Spread the love

ಕಳೆದ ಮೂರು ದಿನಗಳ ಹಿಂದಷ್ಟೇ ಮುಂಬೈನ ಆಸ್ಪತ್ರೆಯಲ್ಲಿ ಆ್ಯಕ್ಸಿಜನ್ ಸೋರಿಕೆಯಿಂದ 24 ಮಂದಿ ದುರಂತ ಸಾವು ಕಂಡ ಬೆನ್ನಲ್ಲೇ ಈಗ ಮತ್ತೊಂದು ‌ದುರಂತದಲ್ಲಿ ಮುಂಬೈನ ಕೋವಿಡ್ ಕೇರ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡದಲ್ಲಿ 13 ಮಂದಿ ಸಜೀವ ದಹನಗೊಂಡ ಘಟನೆ ಜರುಗಿದೆ.

ಮುಂಬೈನ ವಿರಾರ್ ವೆಸ್ಟ್ ನ ವಿಜಯ್ ವಲ್ಲಭ ಕೋವಿಡ್ ಕೇರ್ ಆಸ್ಪತ್ರೆಯ ಐಸಿಯು ವಾರ್ಡ್ ನಲ್ಲಿ ಶುಕ್ರವಾರ ಬೆಳಿಗ್ಗೆ 3.15 ರ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿತು. ಅಗ್ನಿ ದುರಂತದಲ್ಲಿ 13 ಕೊರೊನಾ ಸೋಂಕಿತರು ಸಜೀವ ದಹನಗೊಂಡರು.

ಅಸ್ಪತ್ರೆಯ ಐಸಿಯು ವಾರ್ಡ್ ನಲ್ಲಿ 17 ಕೊರೊನಾ ಸೋಂಕಿತರು ಚಿಕಿತ್ಸೆಗಾಗಿ ದಾಖಲಾಗಿದ್ದರು. ಅಗ್ನಿ ದುರಂತದಲ್ಲಿ 13 ಜನರು ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದು, ಗಾಯಗೊಂಡವರನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.

error: Content is protected !!