ರಾಜ್ಯದಲ್ಲಿ ಕೊರೋನಾ ಗುರುವಾರ ರುದ್ರನರ್ತನ ಮಾಡಿದೆ. ಇಂದು ಕೊರೋನಾ ಸೋಂಕು 25 ಸಾವಿರ ಗಡಿ ದಾಟಿದೆ. ಕೊರೋನಾಗೆ 123 ಮಂದಿ ಬಲಿಯಾಗಿದ್ದಾರೆ.
ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 12,47,997 ಕ್ಕೆ ಏರಿಕೆಯಾಗಿದೆ
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 17,056 ಱಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,45,478 ಆರ್ಟಿಪಿಸಿಆರ್ ಟೆಸ್ಟ್ಗಳು ಸೇರಿದಂತೆ ಒಟ್ಟು 1,62,534 ಕೊರೊನಾ ಟೆಸ್ಟ್ಗಳನ್ನು ನಡೆಸಲಾಗಿದೆ.
ಈ ಪೈಕಿ 25,795 ಜನರಿಗೆ ಕೊರೊನಾ ಪಾಸಿಟಿವ್ ಆಗಿರುವುದು ದೃಢಪಟ್ಟಿದೆ. ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 12,47,997 ಕ್ಕೆ ಏರಿಕೆಯಾಗಿದೆ.
ಇಂದು ಸೋಂಕಿನಿಂದ ಗುಣಮುಖರಾಗಿ 5,624 ಮಂದಿ ಡಿಸ್ವಾರ್ಜ್ ಆಗಿದ್ದಾರೆ. ಈವರೆಗೆ 10,37,857 ಮಂದಿ ಗುಣಮುಖರಾದಂತಾಗಿದೆ.
ಸೋಂಕಿನಿಂದಾಗಿ ಇಂದು 123 ಮಂದಿ ಸಾವನ್ನಪ್ಪಿದ್ದಾರೆ. 13,885 ಮಂದಿ ಈವರೆಗೆ ರಾಜ್ಯದಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ.
ಸದ್ಯ ರಾಜ್ಯದಲ್ಲಿ 1,96,236 ಆ್ಯಕ್ಟಿವ್ ಕೇಸ್ಗಳಿದ್ದು ಈ ಪೈಕಿ 243 ಮಂದಿ ಐಸಿಯುಗಳಲ್ಲಿ ದಾಖಲಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟನೆಯಲ್ಲಿ ಹೇಳಿದೆ.
ಜಿಲ್ಲಾವಾರು ವಿವರ:
ಬಾಗಲಕೋಟೆ 134
ಬಳ್ಳಾರಿ 940
ಬೆಳಗಾವಿ 255
ಬೆಂಗಳೂರು ಗ್ರಾಮಾಂತರ 405 ಬೆಂಗಳೂರು ನಗರ 15244
ಬೀದರ್ 396
ಚಾಮರಾಜನಗರ 271
ಚಿಕ್ಕಬಳ್ಳಾಪುರ 146
ಚಿಕ್ಕಮಗಳೂರು 146
ಚಿತ್ರದುರ್ಗ 142
ದಕ್ಷಿಣ ಕನ್ನಡ 474
ದಾವಣಗೆರೆ 157
ಧಾರವಾಡ 361
ಗದಗ 73
ಹಾಸನ 689
ಹಾವೇರಿ 46
ಕಲಬುರಗಿ 659
ಕೊಡಗು 156
ಕೋಲಾರ 587
ಕೊಪ್ಪಳ 121
ಮಂಡ್ಯ 385
ಮೈಸೂರು 818
ರಾಯಚೂರು 433
ರಾಮನಗರ 260
ಶಿವಮೊಗ್ಗ 207
ತುಮಕೂರು 1231
ಉಡುಪಿ 274
ಉತ್ತರ ಕನ್ನಡ 163
ವಿಜಯಪುರ 328
ಯಾದಗಿರಿ 111
- ಕರ್ನಾಟಕದಲ್ಲಿ ಡಿಸೆಂಬರ್ 4ರ ತನಕ ಭಾರೀ ಮಳೆ ಮುನ್ಸೂಚನೆ
- RBI ಗವರ್ನರ್ ಶಕ್ತಿಕಾಂತ ದಾಸ್ ಆಸ್ಪತ್ರೆಗೆ ದಾಖಲು: ಆರೋಗ್ಯದಲ್ಲಿ ಚೇತರಿಕೆ
- ಮುಡಾ ಹಗರಣ: ಡಿ.10ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
- ಏಕನಾಥ್ ಶಿಂಧೆ ರಾಜೀನಾಮೆ: ದೇವರ ಮೊರೆ ಹೋದ ಬೆಂಬಲಿಗರು, ಮಹಾಯತಿ ಸರ್ಕಾರ ರಚನೆಗೆ ತಯಾರಿ
- ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಸರ್ಕಾರಿ ಶಾಲಾ ಶಿಕ್ಷಕನ ಬಂಧನ
More Stories
ನವೆಂಬರ್ 28: ರಾಜ್ಯದ ಅಭಿವೃದ್ಧಿಗೆ ಮಹತ್ವದ ಸಚಿವ ಸಂಪುಟ ಸಭೆ
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ